ಹರ್ಯಾಣವನ್ನು ಹೊಸಕಿ ಹಾಕಿದ ಗುಜರಾತ್‌ ಜೈಂಟ್ಸ್‌

Team Udayavani, Nov 23, 2018, 6:40 AM IST

haryana-steelers-team-gujarat-fortunegiants.jpg

ಅಹ್ಮದಾಬಾದ್‌: ಪ್ರೊ ಕಬಡ್ಡಿಯಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡ ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದೆ. ಮೊದಲೇ ಕಳಪೆ ಫಾರ್ಮ್ನಲ್ಲಿರುವ ಹರ್ಯಾಣ ಸ್ಟೀಲರ್ ತಂಡವನ್ನು 40-31 ಅಂತರದಿಂದ ಸೋಲಿಸಿದೆ. 

ಗುರುವಾರದ ಈ ಜಯದೊಂದಿಗೆ “ಎ’ ವಲಯದ ಅಗ್ರಸ್ಥಾನಕ್ಕೆ ನೆಗೆದಿರುವ ಗುಜರಾತ್‌ ಪ್ಲೇಆಫ್ ಪ್ರವೇಶಿಸುವುದು ಖಚಿತವಾಗಿದ್ದರೆ, ಹರ್ಯಾಣದ ಮುಂದಿನ ಹಾದಿ ಬಹುತೇಕ ಅಂತ್ಯವಾಗಿದೆ.

ಎಂದಿನಂತೆ ಗುಜರಾತ್‌ ಆಟಗಾರರು ಅದ್ಭುತ ಆಟ ಮುಂದುವರಿಸಿದರು. ತಂಡದ ಜಯಕ್ಕೆ ಕಾರಣರಾದವರು ಸಚಿನ್‌ ಮತ್ತು ಪರ್ವೇಶ್‌ ಭೈನ್ಸ್‌ವಾಲ್‌. 18 ಬಾರಿ ಸ್ಟೀಲರ್ ಕೋಟೆಗೆ ಕಾಲಿಟ್ಟ ಸಚಿನ್‌ 10 ಅಂಕ ಗಳಿಸುವ ಮೂಲಕ ಮೆರೆದಾಡಿದರು. ಇವರಿಗೆ ರಕ್ಷಣೆಯಲ್ಲಿ ನೆರವಾಗಿದ್ದು ಪರ್ವೇಶ್‌. 6 ಬಾರಿ ಯಶಸ್ವಿಯಾಗಿ ಎದುರಾಳಿ ದಾಳಿಗಾರನನ್ನು ತಮ್ಮ ಅಂಕಣದೊಳಕ್ಕೆ ಕೆಡವಿಕೊಂಡ ಪರ್ವೇಶ್‌ ಸರಿಯಾಗಿ 6 ಅಂಕ ಗಳಿಸಿದರು. ಈ ಇಬ್ಬರಿಗೆ ಉಳಿದವರು ಸಂಘಟಿತರಾಗಿ ಬೆಂಬಲ ನೀಡಿದ್ದರಿಂದ ಗುಜರಾತ್‌ ಗೆಲುವು ಸಾಧ್ಯವಾಯಿತು.

ಹರ್ಯಾಣ ಪರ ಖ್ಯಾತ ತಾರೆ ಮೋನು ಗೋಯತ್‌ ಅತ್ಯುತ್ತಮವಾಗಿ ಆಡಿದರು. 16 ಬಾರಿ ಗುಜರಾತ್‌ ಅಂಕಣಕ್ಕೆ ನುಗ್ಗಿದ ಅವರು 10 ಅಂಕ ಗಳಿಸಿದರು. ಇವರಿಗೆ ವಿಕಾಸ್‌ ಖಂಡೋಲ ದಾಳಿಯಲ್ಲಿ ನೆರವು ನೀಡಿದರು. ಆದರೂ ಇದು ಗೆಲುವಿಗೆ ಸಾಕಾಗಲಿಲ್ಲ.

ಇಂದಿನಿಂದ ಪುಣೆಯಲ್ಲಿ ಬೆಂಗಳೂರು ಚರಣ
ಬೆಂಗಳೂರು ಬುಲ್ಸ್‌ ಆತಿಥೇಯತ್ವದ ಪಂದ್ಯಗಳು ಶುಕ್ರವಾರದಿಂದ ಪುಣೆಯಲ್ಲಿ ಆರಂಭವಾಗಲಿವೆ. ವಾಸ್ತವವಾಗಿ ಈ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಬೇಕಿತ್ತು. ಆದರೆ ರಾಜ್ಯ ಕ್ರೀಡಾ ಇಲಾಖೆ ಹಾಗೂ ಬೆಂಗಳೂರು ಬುಲ್ಸ್‌ ನಡುವೆ ಸೂಕ್ತ ಸಮನ್ವಯ ಸಾಧ್ಯವಾಗದೇ ಇದ್ದಿದ್ದರಿಂದ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡಿವೆ. ನ. 29ರ ತನಕ ಇಲ್ಲಿ ಪಂದ್ಯಗಳು ನಡೆಯಲಿವೆ.

ಟಾಪ್ ನ್ಯೂಸ್

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.