ಹಾಕಿ: ಭಾರತ ಮಹಿಳೆಯರಿಗೆ ಗೆಲುವು
Team Udayavani, May 23, 2019, 6:02 AM IST
ಚಿಂಚಿಯೋನ್: ದಕ್ಷಿಣ ಕೊರಿಯ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ 2-0 ಮುನ್ನಡೆ ಸಾಧಿಸಿ ಸರಣಿ ಕೈ ವಶ ಮಾಡಿಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯ ಪರ ಲೀ ಸೆಯುಂಗುj 19ನೇ ನಿಮಿಷದಲ್ಲಿ ಗೋಲು ಸಿಡಿಸಿ ಕೊರಿಯಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು. ಹೀಗಾಗಿ ಕೊರಿಯ ಸರಣಿಯಲ್ಲಿ ಪ್ರಬಲ ಪೈಪೋಟಿ ನಡೆಸಲಿದೆ ಎಂದು ಭಾವಿಸಲಾಗಿತ್ತು. ಆದರೆ ರಾಣಿ ರಾಂಪಾಲ್ (37ನೇ ನಿಮಿಷ) ಹಾಗೂ ನವಜೋತ್ ಸಿಂಗ್ (50ನೇ ನಿಮಿಷ) ಕ್ರಮವಾಗಿ ಗೋಲು ಸಿಡಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಕೊರಿಯಕ್ಕೆ ಎಲ್ಲಿಯೂ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಲೀಗ್ನ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದೆ.