ಹಾಕಿ ರ್ಯಾಂಕಿಂಗ್ ಪ್ರಕಟ: ಭಾರತದ ಪುರುಷರ ತಂಡ ನಂ.3
Team Udayavani, Dec 24, 2021, 5:20 AM IST
ಲುಸಾನ್ನೆ (ಸ್ವಿಜರ್ಲ್ಯಾಂಡ್): ವರ್ಷಾಂತ್ಯದ ಹಾಕಿ ರ್ಯಾಂಕಿಂಗ್ ಪ್ರಕಟಗೊಂಡಿದ್ದು, ಭಾರತದ ಪುರುಷರ ತಂಡ ತೃತೀಯ ಸ್ಥಾನದೊಂದಿಗೆ 2021ಕ್ಕೆ ಗುಡ್ಬೈ ಹೇಳುತ್ತಿದೆ.
ಇದು ಭಾರತೀಯ ಹಾಕಿಯ ಅತ್ಯುನ್ನತ ರ್ಯಾಂಕಿಂಗ್ ಆಗಿರುವುದು ವಿಶೇಷ.
ಟೋಕಿಯೋದಲ್ಲಿ 41 ವರ್ಷಗಳ ಒಲಿಂಪಿಕ್ಸ್ ಪದಕ ಬರಗಾಲ ನೀಗಿಸಿಕೊಂಡದ್ದು ಭಾರತೀಯ ಹಾಕಿಯ ಹೆಗ್ಗಳಿಕೆಯಾಗಿದೆ.
ಹಾಗೆಯೇ ಬುಧವಾರ ಮುಗಿದ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ:ಪ್ರೊ ಕಬಡ್ಡಿ: ಜೈಪುರ್ ಪಿಂಕ್ ಪ್ಯಾಂಥರ್ ವನ್ನು ಕೆಡವಿದ ಗುಜರಾತ್ ಜೈಂಟ್ಸ್
ಭಾರತ 2296.038 ಅಂಕ ಹೊಂದಿದೆ. ಆಸ್ಟ್ರೇಲಿಯ ಅಗ್ರಸ್ಥಾನ ಅಲಂಕರಿಸಿದ್ದು, 2642.25 ಅಂಕ ಹೊಂದಿದೆ. ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಂ ಬೆನ್ನಲ್ಲೇ ಇದ್ದು, 2632.12 ಅಂಕ ಗಳಿಸಿದೆ.