ಚೆಂಡು ಬಡಿದು ಆಸ್ಪತ್ರೆಗೆ ದಾಖಲಾದ ಕ್ರಿಕೆಟಿಗ
Team Udayavani, Jul 10, 2017, 3:50 AM IST
ಲಂಡನ್: ಇಂಗ್ಲೆಂಡಿನ “ನಾಟ್ವೆಸ್ಟ್ ಟಿ-20 ಬ್ಲಾಸ್ಟ್’ ಪಂದ್ಯಾವಳಿಯ ವೇಳೆ ದುರಂತವೊಂದು ಶನಿವಾರ ಸಂಭವಿಸಿದೆ. ಬ್ಯಾಟ್ಸ್ಮನ್ ಬಾರಿಸಿದ ಚೆಂಡು ಮರಳಿ ಬೌಲರ್ನ ತಲೆಗೆ ಬಡಿದಿದ್ದು, ಕುಸಿದು ಬಿದ್ದ ಬೌಲರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾಟ್ಸ್ ಔಟ್ಲಾಸ್ ಮತ್ತು ಬರ್ಮಿಂಗಂ ಬೇರ್ ತಂಡಗಳ ನಡುವಿನ ಪಂದ್ಯದ ವೇಳೆ ಈ ದುರ್ಘಟನೆ ನಡೆದಿದೆ. ಬೌಲರ್ ಲ್ಯೂಕ್ ಫ್ಲೆಚರ್ ಎಸೆದ ಚೆಂಡನ್ನು ಬ್ಯಾಟ್ಸ್ಮನ್ ಸ್ಯಾಮ್ ಹೇನ್ ಬಾರಿಸಿದರು. ಅದೊಂದು “ಸ್ಟ್ರೇಟ್ ಡ್ರೈವ್’ ಹೊಡೆತವಾಗಿತ್ತು. ರಭಸದಿಂದ ಬಂದ ಚೆಂಡು ಬೌಲರ್ ಫ್ಲೆಚರ್ ತಲೆಗೆ ಬಡಿದಿದೆ.
28ರ ಹರೆಯದ ಲ್ಯೂಕ್ ಫ್ಲೆಚರ್ ಅಲ್ಲಿಯೇ ಕುಸಿದು ಬಿದ್ದರು. ಕೂಡಲೇ ಆಂಬ್ಯುಲೆನ್ಸ್ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಸುಮಾರು ಅರ್ಧ ಗಂಟೆ ಕಾಲ ಪಂದ್ಯ ಸ್ಥಗಿತಗೊಂಡಿತು.
ಅದೃಷ್ಟವಶಾತ್ ಫ್ಲೆಚರ್ಗೆ ಯಾವುದೇ ಅಪಾಯ ಎದುರಾಗಿಲ್ಲ. ಅವರ ತಲೆಗೆ ಒಂದೆರಡು ಹೊಲಿಗೆ ಹಾಕಲಾಗಿದೆ ಅಷ್ಟೇ… ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ. ಫ್ಲೆಚರ್ ಕುಳಿತುರುವ ಚಿತ್ರವೊಂದನ್ನು ಟ್ವೀಟ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…