Udayavni Special

ನಾಟ್‌ವೆಸ್ಟ್‌ ಮೆಲುಕು: ಆ ದಿನ ನಾನು ಅಮಿತಾಭ್‌ ಆಗಿದ್ದೆ : ಕೈಫ್

Team Udayavani, Jul 14, 2020, 8:39 AM IST

ನಾಟ್‌ವೆಸ್ಟ್‌ ಮೆಲುಕು: ಆ ದಿನ ನಾನು ಅಮಿತಾಭ್‌ ಆಗಿದ್ದೆ : ಕೈಫ್

ಪ್ರಯಾಗ್‌ರಾಜ್‌: ಭಾರತದ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ 2002ರ ನಾಟ್‌ವೆಸ್ಟ್‌ ಟ್ರೋಫಿ ಗೆಲುವಿಗೆ 1983ರ ವಿಶ್ವಕಪ್‌ ವಿಜಯದಷ್ಟೇ ಮಹತ್ವವಿದೆ. ಅಂದು ದಾದಾ ಪಡೆ ಇಂಗ್ಲೆಂಡ್‌ ವಿರುದ್ಧ 326 ರನ್‌ ಬೆನ್ನಟ್ಟಿ ಜಯಭೇರಿ ಮೊಳಗಿಸಿದ್ದು, ಲಾರ್ಡ್ಸ್‌ ಬಾಲ್ಕನಿಯಲ್ಲಿ ಗಂಗೂಲಿ ಶರ್ಟ್‌ ಬಿಚ್ಚಿ ಸಂಭ್ರಮಾಚರಣೆ ನಡೆಸಿದ ದೃಶ್ಯಾವಳಿ ಈಗಲೂ ಕಣ್ಮುಂದಿದೆ. ಇದಕ್ಕೂ ಮಿಗಿಲಾಗಿ ಆಗ ತೆಂಡುಲ್ಕರ್‌, ಗಂಗೂಲಿ, ಸೆಹವಾಗ್‌, ದ್ರಾವಿಡ್‌ ಮೊದಲಾದ ಸ್ಟಾರ್‌ ಆಟಗಾರರನ್ನು ಹೊಂದಿದ್ದ ತಂಡಕ್ಕೆ ಯುವರಾಜ್‌ ಸಿಂಗ್‌ ಮತ್ತು ಮೊಹಮ್ಮದ್‌ ಕೈಫ್ ಅವರಂಥ ಪ್ರತಿಭಾನ್ವಿತ ಆಟಗಾರರಿಬ್ಬರು ಸೇರ್ಪಡೆ ಯಾಗಿದ್ದರು.

ಸೋಮವಾರ ಭಾರತದ ಈ ಮಹೋನ್ನತ ಸಾಧನೆಗೆ 18 ವರ್ಷ ತುಂಬಿತು. ಈ ಸಂದರ್ಭದಲ್ಲಿ ಅಂದಿನ ಚೇಸಿಂಗ್‌ ಹೀರೋ ಮೊಹಮ್ಮದ್‌ ಕೈಫ್ ತವರಿನ ವಿಜಯೋತ್ಸವವನ್ನು ಮೆಲುಕು ಹಾಕಿದ್ದಾರೆ. ತಾನಾಗ ಅಮಿತಾಭ್‌ ಬಚ್ಚನ್‌ ಎಂಬ ಕಲ್ಪನೆಯಲ್ಲಿ ವಿಹರಿಸುತ್ತಿದ್ದೆ ಎಂದಿದ್ದಾರೆ.

ನಾನು ಗಾಳಿಪಟ ಹಾರಿಸಿದ್ದು!
“ಗೆಲುವಿನ ಬಳಿಕ ನಾನು ತವರಾದ ಅಲಹಾಬಾದ್‌ಗೆ ಆಗಮಿಸಿದೆ. ಆದರೆ ಈ ಸಂಭ್ರವನ್ನು ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಕಾರಣ, ನಾನು ಭಾರೀ ನಾಚಿಕೆ ಸ್ವಭಾವದವನು. ಅಭಿಮಾನಿಗಳೆಲ್ಲ ಮನೆಗೆ ಲಗ್ಗೆ ಇಡುತ್ತಿದ್ದರು. ಮಾಧ್ಯಮದವರಂತೂ ಬೆನ್ನು ಬಿಡುತ್ತಿರಲಿಲ್ಲ. ಯಮುನಾ ನದಿ ತೀರದಲ್ಲಿ ನಾನು ಗಾಳಿಪಟ ಹಾರಿಸುತ್ತಿದ್ದಾಗ ಅಲ್ಲಿಗೂ ಬರುತ್ತಿದ್ದರು. ಕೈಫ್ ಇವತ್ತು ಗಾಳಿಪಟ ಹಾರಿಸಿದರು ಎಂದು ವರದಿ ಮಾಡುತ್ತಿದ್ದರು. ಆದರೆ ನಾನು ಬಾಲ್ಯದಿಂದಲೇ ಇಲ್ಲಿ ಗಾಳಿಪಟ ಬಿಡುತ್ತಿದ್ದುದು ಅವರಿಗೆ ತಿಳಿದಿರಲಿಲ್ಲ…’ ಎಂದು ಕೈಫ್ ನಗುತ್ತ ಹೇಳಿದರು.

ತೆರೆದ ಜೀಪ್‌ನಲ್ಲಿ ಮೆರವಣಿಗೆ
ಮುಂದಿನ ಘಟನೆ ಇನ್ನೂ ಸ್ವಾರಸ್ಯಕರ. ಅದು ಕೈಫ್ಗೆ ಏರ್ಪಡಿಸಲಾದ ರೋಡ್‌ ಶೋನದ್ದಾಗಿತ್ತು.  “ಅಂದು ಅಲಹಾಬಾದ್‌ನಲ್ಲಿ ನನಗೆ ತೆರೆದ ಜೀಪ್‌ನಲ್ಲಿ ಮೆರವಣಿಗೆ ಏರ್ಪಡಿ ಸಲಾಗಿತ್ತು. 5-6 ಕಿ.ಮೀ. ಸಾಗಲು ಬರೋಬ್ಬರಿ 4 ಗಂಟೆ ತಗುಲಿತ್ತು. ಎಲ್ಲೆಡೆ ಜನವೋ ಜನ. ಜತೆಗೆ ಹಾರ, ತುರಾಯಿ. ಆಗ ನಾನು ಅಮಿತಾಭ್‌ ಬಚ್ಚನ್‌ ಎಂಬ ಕಲ್ಪನೆಯಲ್ಲಿ ತೇಲಾಡುತ್ತಿದ್ದೆ. ಕಾರಣ, ನಾನು ಹುಡುಗನಾಗಿದ್ದಾಗ ಚುನಾವಣೆಯಲ್ಲಿ ಗೆದ್ದ ಅಮಿತಾಭ್‌ ಅವರನ್ನು ಇದೇ ಬೀದಿಯಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದರು. ಆ ದೃಶ್ಯ ಕಣ್ಮುಂದೆ ಸುಳಿಯುತ್ತಿತ್ತು…’ ಎಂದು ಕೈಫ್ ಆ ದಿನದ ಸಂಭ್ರಮವನ್ನು ತೆರೆದಿಟ್ಟರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kumarsawamy

ಯಾರೇ ಗೂಂಡಾಗಿರಿ ಮಾಡಿದರೂ ಮುಲಾಜಿಲ್ಲದೆ ಮಟ್ಟಹಾಕಿ: H.D ಕುಮಾರಸ್ವಾಮಿ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

dk-shivakumar

ಡಿ.ಜೆ ಹಳ್ಳಿ ಗಲಭೆಯ ಹಿಂದೆ ವ್ಯವಸ್ಥಿತ ಸಂಚು, ಯಾರೂ ಕಾನೂನು ಕೈಗೆತ್ತಿಕೊಳ್ಳಬೇಡಿ: ಡಿಕೆಶಿ

ಎರಡು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ದರ ಎಷ್ಟು ಗೊತ್ತಾ?

ಎರಡು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ದರ ಎಷ್ಟು ಗೊತ್ತಾ?

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆಪ್ ಲೋಕಾರ್ಪಣೆ

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆ್ಯಪ್ ಲೋಕಾರ್ಪಣೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ವರದಿ ನೆಗೆಟಿವ್: ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಾಜಿ ಸಿಎಂ ಸಿದ್ದರಾಮಯ್ಯ ಕೋವಿಡ್ ವರದಿ ನೆಗೆಟಿವ್: ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಸ್ಪರ್ಧೆಯಲ್ಲಿ ಪತಂಜಲಿ

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಸ್ಪರ್ಧೆಯಲ್ಲಿ ಪತಂಜಲಿ

ಪಾಲೆರ್ಮೊ ಲೇಡೀಸ್‌ ಟೆನಿಸ್‌ ಫಿಯೋನಾ ಫೆರೊ ಚಾಂಪಿಯನ್‌

ಪಾಲೆರ್ಮೊ ಲೇಡೀಸ್‌ ಟೆನಿಸ್‌ ಫಿಯೋನಾ ಫೆರೊ ಚಾಂಪಿಯನ್‌

ಬಾಂಗ್ಲಾದ ಮಾಜಿ ಸ್ಪಿನ್ನರ್‌ ಮೊಶರ್ರಫ್ ಗೆ ಕೋವಿಡ್ 19 ಪಾಸಿಟಿವ್‌

ಬಾಂಗ್ಲಾದ ಮಾಜಿ ಸ್ಪಿನ್ನರ್‌ ಮೊಶರ್ರಫ್ ಗೆ ಕೋವಿಡ್ 19 ಪಾಸಿಟಿವ್‌

MUST WATCH

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agricultureಹೊಸ ಸೇರ್ಪಡೆ

ದರ್ಶನ್‌ ಚಿತ್ರರಂಗ ಎಂಟ್ರಿಗೆ 23 ವರ್ಷ

ದರ್ಶನ್‌ ಚಿತ್ರರಂಗ ಎಂಟ್ರಿಗೆ 23 ವರ್ಷ

ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ: ಕುಡತಿನಿ ಶ್ರೀನಿವಾಸ್

ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ: ಕುಡತಿನಿ ಶ್ರೀನಿವಾಸ್

kumarsawamy

ಯಾರೇ ಗೂಂಡಾಗಿರಿ ಮಾಡಿದರೂ ಮುಲಾಜಿಲ್ಲದೆ ಮಟ್ಟಹಾಕಿ: H.D ಕುಮಾರಸ್ವಾಮಿ

ಡಯಾಬಿಟಿಸ್‌ ಸುತ್ತ ಶುಗರ್‌ಲೆಸ್‌ ಸಿನಿಮಾ

ಡಯಾಬಿಟಿಸ್‌ ಸುತ್ತ ಶುಗರ್‌ಲೆಸ್‌ ಸಿನಿಮಾ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.