Icc World Cup 2023: ಭಾರತೀಯ ದಾಖಲೆ ಬರೆದ ಮೊಹಮ್ಮದ್ ಶಮಿ
Team Udayavani, Nov 3, 2023, 3:37 PM IST
ಮುಂಬೈ: ಈ ಬಾರಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಆಡಿದ ಕೇವಲ ಮೂರು ಪಂದ್ಯಗಳಲ್ಲಿ 14 ವಿಕೆಟ್ ಕಿತ್ತಿದ್ದಾರೆ. ಸ್ಥಾನಕ್ಕಾಗಿ ವಿಪರೀತ ಪೈಪೋಟಿಯಿರುವ ಹೊತ್ತಿನಲ್ಲಿ ಶಮಿ ಇಂತಹದ್ದೊಂದು ಅದ್ಭುತ ಸಾಧನೆ ಮಾಡಿದ್ದಾರೆ. ಇದರ ಮಧ್ಯೆ ಇನ್ನೊಂದು ವಿಶೇಷ ಸಾಧನೆ ಮಾಡಿದ್ದಾರೆ.
ಏಕದಿನ ವಿಶ್ವಕಪ್ ಗಳಲ್ಲಿ ಗರಿಷ್ಠ ವಿಕೆಟ್ ಕಿತ್ತ ಭಾರತೀಯ ಬೌಲರ್ ಅವರು. ಒಟ್ಟು 45 ವಿಕೆಟ್ ಕಿತ್ತಿರುವ ಅವರು ಭಾರತೀಯರ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಸಾಧನೆಗಾಗಿ ಅವರು ಬಳಸಿಕೊಂಡಿರುವುದು ಕೇವಲ 14 ಇನಿಂಗ್ಸ್ ಮಾತ್ರ.
ಇದನ್ನೂ ಓದಿ:Shah Rukh Khan ಬರ್ತ್ ಡೇ ವೇಳೆ ಅಭಿಮಾನಿಗಳ 17 ಮೊಬೈಲ್ ಫೋನ್ಗಳು ಕಳವು !
ಈ ಹಿಂದೆ 23 ಇನಿಂಗ್ಸ್ ಬಳಸಿಕೊಂಡಿರುವ ಜಹೀರ್ ಖಾನ್, 33 ಇನಿಂಗ್ಸ್ ಬಳಸಿಕೊಂಡಿರುವ ಜಾವಗಲ್ ಶ್ರೀನಾಥ್ ತಲಾ 44 ವಿಕೆಟ್ ಪಡೆದು ನಂತರದ ಸ್ಥಾನಕ್ಕೆ ಇಳಿದಿದ್ದಾರೆ.