Kohli ನಾಯಕರಾಗಿದ್ದರೆ ಭಾರತ ಸೋಲುತ್ತಿರಲಿಲ್ಲ: ಮೈಕಲ್ ವಾನ್
Team Udayavani, Feb 1, 2024, 12:13 AM IST
ಲಂಡನ್: ಹೈದರಾ ಬಾದ್ನಲ್ಲಿ ಇಂಗ್ಲೆಂಡ್ ಸಾಧಿಸಿದ ಗೆಲುವು ಕ್ರಿಕೆಟ್ ಜನಕರ ನಾಡಿನಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೊಂದು ಅಚ್ಚರಿ ಹಾಗೂ ಅನಿರೀಕ್ಷಿತ ಜಯ ಎಂಬುದಾಗಿ ಬಣ್ಣಿಸಲಾಗುತ್ತಿದೆ. ಹಾಗೆಯೇ ಭಾರತ ತಾನೇ ಹೆಣೆದ ಸ್ಪಿನ್ ಉರುಳಿಗೆ ಸಿಕ್ಕಿಹಾಕಿಕೊಂಡಿತು ಎಂದೂ ಚಪ್ಪಾಳೆ ತಟ್ಟುತ್ತಿದ್ದಾರೆ.
ಈ ನಡುವೆ ಇಂಗ್ಲೆಂಡಿನ ಮಾಜಿಗಳು ಒಂದೊಂದು ರೀತಿಯ ಹೇಳಿಕೆ ನೀಡುತ್ತ ಸುದ್ದಿಯಾಗುತ್ತಿದ್ದಾರೆ. ಇವರಲ್ಲಿ ಮಾಜಿ ನಾಯಕ ಮೈಕಲ್ ವಾನ್ ಕೂಡ ಒಬ್ಬರು. ಒಂದು ವೇಳೆ ವಿರಾಟ್ ಕೊಹ್ಲಿ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ನಾಯಕರಾಗಿದ್ದರೆ ಭಾರತ ಖಂಡಿತ ಸೋಲುತ್ತಿರಲಿಲ್ಲ ಎಂಬು ದಾಗಿ ವಾನ್ ಹೇಳಿದ್ದಾರೆ. ಅವರ ಪ್ರಕಾರ ರೋಹಿತ್ ಶರ್ಮ “ಸ್ವಿಚ್x ಆಫ್’ ಆಗಿದ್ದಾರೆ.
“ಭಾರತ ತಂಡ ವಿರಾಟ್ ಕೊಹ್ಲಿ ಮತ್ತು ಅವರ ನಾಯಕತ್ವವನ್ನು ಮಿಸ್ ಮಾಡಿಕೊಂಡಿದೆ. ಅವರೇ ನಾಯಕರಾಗಿದ್ದರೆ ಭಾರತ ಖಂಡಿತ ಹೈದರಾಬಾದ್ ಟೆಸ್ಟ್ನಲ್ಲಿ ಸೋಲನು ಭವಿಸು ತ್ತಿರಲಿಲ್ಲ. ರೋಹಿತ್ ಓರ್ವ ಲೆಜೆಂಡ್, ಶ್ರೇಷ್ಠ ಆಟಗಾರ. ಆದರೆ ಅವರೀಗ ಸಂಪೂರ್ಣವಾಗಿ ಸ್ವಿಚ್x ಆಫ್ ಆಗಿದ್ದಾರೆ. ಅವರ ನಾಯಕತ್ವದ ಗುಣಮಟ್ಟ ತೀರಾ ಸಾಮಾನ್ಯ. ಹೈದರಾಬಾದ್ ಪಂದ್ಯದಲ್ಲಿ ಅವರು ಯಾವುದೇ ಕಾರ್ಯ ತಂತ್ರ ವನ್ನು ಜಾರಿಗೆ ತರಲಿಲ್ಲ’ ಎಂದು ಮೈಕಲ್ ವಾನ್ ಹೇಳಿದ್ದಾರೆ.