“ಕ್ರಿಕೆಟಿಗರ ನಿರ್ಧಾರಕ್ಕೆ ಭಾರತ ಕಾರಣವಲ್ಲ’

Team Udayavani, Sep 12, 2019, 5:45 AM IST

ಕೊಲಂಬೊ: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ಥಾನ ಪ್ರವಾಸದಿಂದ ಹಿಂದೆ ಸರಿದದ್ದು ಸ್ವಂತ ನಿರ್ಧಾರದಿಂದಲೇ ಹೊರತು ಭಾರತದ ಬೆದರಿಕೆ ಅಥವಾ ಒತ್ತಡದಿಂದಲ್ಲ ಎಂದು ಅಲ್ಲಿನ ಕ್ರೀಡಾ ಸಚಿವ ಹರೀನ್‌ ಫೆರ್ನಾಂಡೊ ಸ್ಪಷ್ಟಪಡಿಸಿದ್ದಾರೆ.

“ಶ್ರೀಲಂಕಾ ಆಟಗಾರರು ಪಾಕಿಸ್ಥಾನ ಪ್ರವಾಸ ನಿರಾಕರಿಸಿದ್ದಕ್ಕೆ ಭಾರತದ ಒತ್ತಡವೇ ಕಾರಣ. ಪಾಕಿಸ್ಥಾನಕ್ಕೆ ಹೋದರೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಭಾರತ ಅವರಿಗೆ ಬೆದರಿಕೆ ಒಡ್ಡಿದೆ’ ಎಂದು ಪಾಕಿಸ್ಥಾನದ ಸಚಿವ ಫ‌ವಾದ್‌ ಚೌಧರಿ ಒಂದು ದಿನದ ಹಿಂದೆ ಹೇಳಿಕೆ ನೀಡಿದ್ದರು.

ಇದೀಗ ಚೌಧರಿ ಹೇಳಿಕೆಗೆ ತಿರುಗೇಟು ನೀಡಿರುವ ಫೆರ್ನಾಂಡೊ, “ನಮ್ಮ ಕ್ರಿಕೆಟಿಗರು 2009ಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ. ಇದು ಆಟಗಾರರ ಸ್ವಂತ ನಿರ್ಧಾರವಾಗಿದೆ. ಭಾರತ ಅಥವಾ ಇನ್ನಿತರ ರಾಷ್ಟ್ರಗಳನ್ನು ಈ ವಿಚಾರದಲ್ಲಿ ಗುರಿಯಾಗಿಸಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ