ಕಾಮನ್ವೆಲ್ತ್ ಗೇಮ್ಸ್ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ
Team Udayavani, Aug 7, 2022, 9:42 PM IST
ಬರ್ಮಿಂಗ್ಹ್ಯಾಮ್: ಒಲಿಂಪಿಕ್ ಕಂಚು ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಶನಿವಾರ ತಡರಾತ್ರಿ ನಡೆದ ಸೆಮಿಫೈನಲ್ ಹೋರಾಟದಲ್ಲಿ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳಿಂದ ಸೋಲಿಸಿ ಫೈನಲಿಗೇರಿದೆ.
ಫೈನಲ್ನಲ್ಲಿ ಭಾರತವು ಆಸ್ಟ್ರೇಲಿಯ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ಈ ಹಿಂದೆ 2014ರಲ್ಲಿ ಫೈನಲಿಗೇರಿತ್ತು. ಆದರೆ ಫೈನಲ್ನಲ್ಲಿ ಆಸ್ಟ್ರೇಲಿಯಕ್ಕೆ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು.
ಭಾರತ ಪರ ಅಭಿಷೇಕ್, ಮನ್ದೀಪ್ ಸಿಂಗ್ ಮತ್ತು ಜುಗ್ರಾಜ್ ಸಿಂಗ್ ಅವರು ಗೋಲು ದಾಖಲಿಸಿದ್ದರೆ ದಕ್ಷಿಣ ಆಫ್ರಿಕಾದ ರಿಯಾನ್ ಜುಲಿಯಸ್ ಮತ್ತು ಮುಸ್ತಫಾ ಕ್ಯಾಸಿಯಮ್ ಗೋಲು ಹೊಡೆದಿದ್ದರು.
ಆಟಗಾರರ ಸಾಮರ್ಥ್ಯ ಮತ್ತು ರ್ಯಾಂಕಿಂಗನ್ನು ಗಮನಿಸಿದರೆ ಭಾರತ ಸುಲಭವಾಗಿ ಈ ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ ದಕ್ಷಿಣ ಆಫ್ರಿಕಾದ ಗೋಲ್ಕೀಪರ್ ಹಾಗೂ ಆಟಗಾರರ ಅಮೋಘ ಆಟದಿಂದಾಗಿ ಭಾರತ ಬಹಳಷ್ಟು ಕಷ್ಟಪಟ್ಟು ಗೆಲುವು ಸಾಧಿಸಿತ್ತು. ಎದುರಾಳಿಯ ಗೋಲ್ಕೀಪರ್ ಗೋವಾನ್ ಜೋನ್ಸ್ ಅವರ ಅದ್ಭುತ ನಿರ್ವಹಣೆಯಿಂದ ಭಾರತ ಹಲವು ಗೋಲು ದಾಖಲಿಸುವ ಅವಕಾಶದಿಂದ ವಂಚಿತವಾಗಿತ್ತು. ಇಲ್ಲದಿದ್ದರೆ ಭಾರತ ಇನ್ನಷ್ಟು ಗೋಲು ಅಂತರದಿಂದ ಗೆಲ್ಲುವ ಸಾಧ್ಯತೆಯಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ