ಎಫ್ಐಎಚ್ ಪುರುಷರ ಹಾಕಿ ಫೈವ್ಸ್ ಸರಣಿ: ಭಾರತ ಫೈನಲ್ಗೆ
Team Udayavani, Jun 5, 2022, 10:55 PM IST
ಲುಸಾನ್ನೆ: ಎಫ್ಐಎಚ್ ಪುರುಷರ ಹಾಕಿ ಫೈವ್ಸ್ ಸರಣಿಯಲ್ಲಿ ಭಾರತ ಫೈನಲ್ ತಲುಪಿದೆ. ಪ್ರಶಸ್ತಿ ಸಮರದಲ್ಲಿ ಪೋಲೆಂಡ್ ತಂಡವನ್ನು ಎದುರಿಸಲಿದೆ.
ರವಿವಾರದ ಎರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತು. ಮಲೇಷ್ಯವನ್ನು 7-3, ಪೋಲೆಂಡನ್ನು 6-2 ಗೋಲುಗಳಿಂದ ಮಣಿಸಿತು. ಶನಿವಾರ ಸ್ವಿಜರ್ಲ್ಯಾಂಡ್ ವಿರುದ್ಧ 4-3 ಜಯ ಸಾಧಿಸಿತ್ತು.
ಆದರೆ ಪಾಕಿಸ್ಥಾನ ವಿರುದ್ಧ 2-2 ಡ್ರಾ ಮಾಡಿಕೊಂಡಿತ್ತು. ಹೀಗೆ ರೌಂಡ್ ರಾಬಿನ್ ಲೀಗ್ ಕೂಟದಲ್ಲಿ 3 ಗೆಲುವು, ಒಂದು ಡ್ರಾ ಸಾಧನೆಯೊಂದಿಗೆ ಭಾರತ 10 ಅಂಕಗಳೊಂದಿಗೆ ಅಗ್ರಸ್ಥಾನಿಯಾಯಿತು. ಪೋಲೆಂಡ್ ದ್ವಿತೀಯ ಸ್ಥಾನ ಗಳಿಸಿತು (6 ಅಂಕ).