ಭುವನೇಶ್ವರ್-ನೂಪುರ ನಿಶ್ಚಿತಾರ್ಥ
Team Udayavani, Oct 6, 2017, 7:00 AM IST
ಹೊಸದಿಲ್ಲಿ: ವೇಗಿ ಭುವನೇಶ್ವರ್ ಕುಮಾರ್ ಬುಧವಾರ ತಮ್ಮ ಗೆಳತಿ ನೂಪುರ ನಗರ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗ್ರೇಟರ್ ನೊಯ್ಡಾ ದಲ್ಲಿ ಈ ಕಾರ್ಯಕ್ರಮ ನಡೆಯಿತು.
ಉತ್ತರ ಪ್ರದೇಶದ ಮೀರತ್ನವರಾದ ನೂಪುರ ನಗರ್ ಎಂಜಿನಿಯರಿಂಗ್ ಮಾಡಿ ಎಂಎನ್ಸಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಡಿಸೆಂಬರ್ನಲ್ಲಿ ವಿವಾಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಂಗಳವಾರವಷ್ಟೇ ಭುವನೇಶ್ವರ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನೂಪುರ ನಗರ್ ಜತೆ ಡಿನ್ನರ್ ಮಾಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಮೊದಲು ಇದು ಬಂಗಾಲಿ ನಟಿ ಅನುಸ್ಮತಿ ಸರ್ಕಾರ್ ಎಂದು ಸುದ್ದಿಯಾಗಿತ್ತು.