ವನಿತಾ ಹಾಕಿ: ಕೊರಿಯಕ್ಕೆ ಮತ್ತೆ ಸೋಲು: 3-1 ಮುನ್ನಡೆಯಲ್ಲಿ ಭಾರತ


Team Udayavani, Mar 10, 2018, 7:30 AM IST

s-1.jpg

ಸೋಲ್‌: ಭಾರತೀಯ ವನಿತಾ ಹಾಕಿ ಆಟಗಾರ್ತಿಯರು ನಾಲ್ಕನೇ ಪಂದ್ಯದಲ್ಲಿ ಮತ್ತೆ ಭರ್ಜರಿ ಆಟವಾಡಿ ತಮಗಿಂತ ಉತ್ತಮ ರ್‍ಯಾಂಕ್‌ ಹೊಂದಿರುವ ಕೊರಿಯ ಆಟಗಾರ್ತಿಯರನ್ನು 3-1 ಗೋಲುಗಳಿಂದ ಸೋಲಿಸಿದರು. ಈ ಗೆಲುವಿನ ಮೂಲಕ ಭಾರತ ವನಿತಾ ತಂಡ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿತು. ಸರಣಿಯ ಅಂತಿಮ ಪಂದ್ಯ ಮಾ. 11ರಂದು ನಡೆಯಲಿದೆ. 

ಪಂದ್ಯದ ಮೊದಲ ಕ್ವಾರ್ಟರ್‌ ಅವಧಿಯಲ್ಲಿ ಗುರ್ಜಿತ್‌ ಕೌರ್‌ ಎರಡನೇ ಮತ್ತು ದೀಪಿಕಾ14ನೇ ನಿಮಿಷದಲ್ಲಿ ಗೋಲು ಹೊಡೆದ ಕಾರಣ ಭಾರತ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಿತು. ಪೂನಂ ರಾಣಿ 47ನೇ ನಿಮಿಷದಲ್ಲಿ ಭರ್ಜರಿ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಕ್ಕೇರಿಸಿದರು. ಪಂದ್ಯದ ಅಂತಿಮ ಹಂತದಲ್ಲಿ ಕೊರಿಯದ ಮಿ ಹ್ಯುನ್‌ ಪಾರ್ಕ್‌ ತಂಡದ ಏಕೈಕ ಗೋಲನ್ನು ಹೊಡೆದರು.

ಪಂದ್ಯ ಆರಂಭವಾಗುತ್ತಲೇ ಭಾರತೀಯ ವನಿತೆಯರು ಕೊರಿಯದ ರಕ್ಷಣಾ ಗೋಡೆ ಮುರಿಯಲು ಮುಂದಾದರು. ಎರಡನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ಗುರ್ಜಿತ್‌ ಕೌರ್‌ ಈ ಅವಕಾಶದಲ್ಲಿ ಚೆಂಡನ್ನು ಕೊರಿಯದ ಗೋಲ್‌ಕೀಪರ್‌ ಹೀಬಿನ್‌ ಜಂಗ್‌ ಅವರನ್ನು ವಂಚಿಸಿ ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ನಾಲ್ಕನೇ ನಿಮಿಷದಲ್ಲಿ ಕೊರಿಯಕ್ಕೆ ಗೋಲು ಹೊಡೆಯುವ ಅವಕಾಶ ಲಭಿಸಿತ್ತು. ಆದರೆ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಹೊಡೆದ ಚೆಂಡು ಹೊರಗೆ ಹೋಯಿತು. 10ನೇ ನಿಮಿಷದಲ್ಲಿ ಕೊರಿಯಕ್ಕೆ ಇನ್ನೊಂದು ಪೆನಾಲ್ಟಿ ಕಾರ್ನರ್‌ ಸಿಕ್ಕಿದ್ದರೂ ಭಾರತೀಯ ಗೋಲ್‌ಕೀಪರ್‌ ಸ್ವಾತಿ ಅದನ್ನು ತಡೆಯಲು ಯಶಸ್ವಿಯಾಗಿದ್ದರು. 

ಪಂದ್ಯದ 14ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೆ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಈ ಸಲ ದೀಪಿಕಾ ಅದನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಹೀಗಾಗಿ ಮೊದಲ ಕ್ವಾರ್ಟರ್‌ ಅವಧಿ ಮುಗಿದಾಗ ಭಾರತ 2-0 ಮುನ್ನ ಡೆಯೊಂದಿಗೆ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಿತ್ತು. ದ್ವಿತೀಯ ಕ್ವಾರ್ಟರ್‌ ಅವಧಿಯಲ್ಲಿ ಎರಡೂ ತಂಡಗಳ ಆಟಗಾರ್ತಿಯರು ಗೋಲ್‌ ಹೊಡೆಯಲು ಹೋರಾಡಿದರು. 

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.