ಟೀಂ ಇಂಡಿಯಾ ಮಹಾ ಕುಸಿತ: 46 ವರ್ಷ ಹಿಂದಿನ ದಾಖಲೆ ಪತನ
Team Udayavani, Dec 20, 2020, 12:25 PM IST
ಅಡಿಲೇಡ್: ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಹೀನಾಯ ಕುಸಿತ ಕಂಡಿತು. ಒಂದಿಡೀ ಇನ್ನಿಂಗ್ಸ್ ನಲ್ಲಿ ತಂಡ ಗಳಿಸಿದ್ದು 36 ರನ್ ಮಾತ್ರ. ಇದರೊಂದಿಗೆ 46 ವರ್ಷಗಳ ಹಿಂದಿನ ದಾಖಲೆ ಶನಿವಾರ ಮುರಿಯಲ್ಪಟ್ಟಿತು.
ಭಾರತದ ಈವರೆಗಿನ ಕನಿಷ್ಠ ಟೆಸ್ಟ್ ಮೊತ್ತ 42 ರನ್. ಇದು 1974ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ದಾಖಲಾಗಿತ್ತು.
ಅಂದು ಮೈಕ್ ಡೆನ್ನಿಸ್ ನಾಯಕತ್ವದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 629 ರನ್ ಪೇರಿಸಿತ್ತು. ಜವಾಬು ನೀಡಿದ ಭಾರತ 302 ರನ್ ಮಾಡಿತು. ಆದರೆ ಫಾಲೋಆನ್ನಿಂದ ಪಾರಾಗಲಾಗಲಿಲ್ಲ. ದ್ವಿತೀಯ ಇನ್ನಿಂಗ್ಸ್ನಲ್ಲಿ 17 ಓವರ್ ಆಡುವಷ್ಟರಲ್ಲಿ 42 ರನ್ನಿಗೆ ಸರ್ವಪತನ ಕಂಡು ಇನ್ನಿಂಗ್ಸ್ ಹಾಗೂ 285 ರನ್ನುಗಳ ಭಾರೀ ಸೋಲಿಗೆ ಗುರಿಯಾಯಿತು.
ಇದನ್ನೂ ಓದಿ:ಹೀನಾಯವಾಗಿ ಸೋತ ಭಾರತಕ್ಕೆ ಮತ್ತೊಂದು ಆಘಾತ: ಟೆಸ್ಟ್ ಸರಣಿಯಿಂದ ಪ್ರಮುಖ ಬೌಲರ್ ಔಟ್
ಅಂದು ಭಾರತದ ಸರದಿಯಲ್ಲಿ ಏಕನಾಥ್ ಸೋಲ್ಕರ್ ಮಾತ್ರ ಹತ್ತರ ಗಡಿ ದಾಟಿದ್ದರು (ಔಟಾಗದೆ 18). ಕ್ರಿಸ್ ಓಲ್ಡ್ 21ಕ್ಕೆ 5, ಜೆಫ್ ಅರ್ನಾಲ್ಡ್ 19ಕ್ಕೆ 4 ವಿಕೆಟ್ ಉರುಳಿಸಿ ಭಾರತದ ಕತೆ ಮುಗಿಸಿದ್ದರು.
ಅಂದು ಅಜಿತ್ ವಾಡೇಕರ್ ಭಾರತ ತಂಡದ ನಾಯಕರಾಗಿದ್ದರು. ಕ್ರಿಕೆಟ್ ದಾಖಲೆಗಳಾವುವೂ ಶಾಶ್ವತವಲ್ಲ ಎಂದು ವಿರಾಟ್ ಕೊಹ್ಲಿ ಪಡೆ 46 ವರ್ಷಗಳ ಬಳಿಕ ಸಾಧಿಸಿ ತೋರಿಸಿತು!
ಭಾರತದ ದ್ವಿತೀಯ ಇನ್ನಿಂಗ್ಸ್ನಲ್ಲಿ ಯಾರೂ ಎರಡಂಕೆಯ ಮೊತ್ತ ದಾಖಲಿಸಲಿಲ್ಲ. ಎದುರಿಸಿದ್ದು ಬರೀ 21.2 ಓವರ್. ಭಾರತದ ಸರದಿಯ ಇಂಥ ವೈರಾಗ್ಯ ಹುಟ್ಟಿಸುವ ಸಂಗತಿಗಳು ಸಾಕಷ್ಟಿವೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು