ಇಂಡೋನೇಷ್ಯಾ ಬ್ಯಾಡ್ಮಿಂಟನ್ ಸೈನಾ- ಸಿಂಧು ಮುಖಾಮುಖಿ
Team Udayavani, Jan 26, 2018, 9:57 AM IST
ಜಕಾರ್ತ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್ ಫೈನಲ್ನಲ್ಲಿ ಮುಖಾಮುಖೀಯಾಗಲಿದ್ದಾರೆ.
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-12, 21-18ರಿಂದ ಚೀನದ ಚೆನ್ ಕ್ಸಿಯಾಕ್ಸಿನ್ ವಿರುದ್ಧ ಗೆಲುವು ಸಾಧಿಸಿದರು. 37 ನಿಮಿಷಗಳ ಕಾಲ ನಡೆದ ಈ ಪಂದ್ಯದ ಮೊದಲ ಗೇಮ್ನಲ್ಲಿ ಸೈನಾ ಸುಲಭ ಜಯ ಸಾಧಿಸಿದರು. ಆದರೆ 2ನೇ ಗೇಮ್ನಲ್ಲಿ ಫೈಪೋಟಿ ಕಂಡುಬಂತು.
ಮತ್ತೂಂದು ವನಿತಾ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-12, 21- ರಿಂದ ಮಲೇಷ್ಯಾದ ಗೋಹ್ ಜಿನ್ ವೈ ವಿರುದ್ಧ ಗೆಲುವು ಒಲಿಸಿಕೊಂಡರು. ಸಿಂಧು-ಸೈನಾ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಈವರೆಗೆ 2 ಸಲ ಮುಖಾಮುಖೀಯಾಗಿದ್ದು, ಇಬ್ಬರೂ ಒಂದೊಂದು ಜಯ ದಾಖಲಿಸಿದ್ದಾರೆ.