INDvsENG; ಶತಕದಂಚಿನಲ್ಲಿ ಎಡವಿದ ಜಡೇಜಾ: 190 ರನ್ ಮುನ್ನಡೆ ಸಾಧಿಸಿದ ಭಾರತ
Team Udayavani, Jan 27, 2024, 10:31 AM IST
ಹೈದರಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 190 ರನ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 436 ರನ್ ಗಳಿಗೆ ಆಲೌಟಾಗಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಗೆ 421 ರನ್ ಮಾಡಿತ್ತು. ರವೀಂದ್ರ ಜಡೇಜಾ 81 ರನ್ ಮಾಡಿ ಅಜೇಯರಾಗಿದ್ದರು. ಇಂದು 87 ರನ್ ಗಳಿಸಿದ್ದ ವೇಳೆ ರೂಟ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದ ಜಡೇಜಾ ಶತಕ ತಪ್ಪಿಸಿಕೊಂಡರು. ಈ ಮೂಲಕ ಮೂವರು ಭಾರತೀಯರು ಈ ಇನ್ನಿಂಗ್ಸ್ ನಲ್ಲಿ ಶತಕದ ಗಡಿಯಲ್ಲಿ ಔಟಾದರು. ಜೈಸ್ವಾಲ್ 80 ರನ್ ಮತ್ತು ರಾಹುಲ್ 86 ರನ್ ಮಾಡಿದ್ದರು.
41 ರನ್ ಮಾಡಿ ಅಜೇಯರಾಗಿದ್ದ ಅಕ್ಷರ್ ಪಟೇಲ್ ಇಂದು 44 ರನ್ ಗಳಿಗೆ ಔಟಾದರು. ಭಾರತ ಸದ್ಯ 190 ರನ್ ಗಳ ಮುನ್ನಡೆಯಲ್ಲಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 246 ರನ್ ಗಳಿಸಿತ್ತು.
ಇಂಗ್ಲೆಂಡ್ ಪರ ಜೋ ರೂಟ್ ನಾಲ್ಕು ವಿಕೆಟ್ ಕಿತ್ತು ಉತ್ತಮ ಬೌಲರ್ ಎನಿಸಿದರು. ಟಾಮ್ ಹಾರ್ಟ್ಲೆ ಮತ್ತು ರಹಾನ್ ಅಹಮದ್ ತಲಾ ಎರಡು ವಿಕೆಟ್ ಪಡೆದರು. ಜ್ಯಾಕ್ ಲೀಚ್ ಒಂದು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?