ಹೈದರಾಬಾದ್‌ ಡೆಲ್ಲಿಗೆ ಗೆಲುವು

Team Udayavani, Apr 15, 2019, 9:52 AM IST

ಹೈದರಾಬಾದ್‌: ಸನ್‌ರೈಸರ್ ಹೈದರಾಬಾದ್‌ ವಿರುದ್ಧದ ಮರು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 39 ರನ್‌ಗಳ ಜಯ ಸಾಧಿಸಿದೆ.

ರವಿವಾರ ರಾತ್ರಿಯ ಐಪಿಎಲ್‌ ಹಣಾಹಣಿಯಲ್ಲಿ ಡೆಲ್ಲಿ 7 ವಿಕೆಟಿಗೆ 155 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಆತಿಥೇಯ ಹೈದರಾಬಾದ್‌ ಆರಂಭದಲ್ಲಿ ಗೆಲುವಿನ ಲಕ್ಷಣದಲ್ಲಿತ್ತಾದರೂ ನಾಟಕೀಯ ಕುಸಿತ ಕಂಡು 116 ರನ್ನಿಗೆ ಸರ್ವಪತನ ಕಂಡಿತು. ಡೆಲ್ಲಿ ಪರ ರಬಾಡ 4, ಕ್ರಿಸ್‌ ಮಾರಿಸ್‌ ಮತ್ತು ಕೀಮೊ ಪೌಲ್‌ ತಲಾ 3ವಿಕೆಟ್‌ ಕಿತ್ತರು.

ಎಡಗೈ ಮಧ್ಯಮ ವೇಗಿ ಖಲೀಲ್‌ ಅಹ್ಮದ್‌ 30 ರನ್ನಿಗೆ 3 ವಿಕೆಟ್‌ ಕಿತ್ತು ಡೆಲ್ಲಿಗೆ ಕಡಿವಾಣ ಹೇರಿದರು. ಭುವನೇಶ್ವರ್‌ ಕೂಡ ಉತ್ತಮ ದಾಳಿ ಸಂಘಟಿಸಿ 33ಕ್ಕೆ 2 ವಿಕೆಟ್‌ ಕಿತ್ತರು. ರಶೀದ್‌ 4 ಓವರ್‌ಗಳ ಕೋಟಾದಲ್ಲಿ ಕೇವಲ 22 ರನ್‌ ಬಿಟ್ಟುಕೊಟ್ಟರು. ಹೀಗಾಗಿ, ಒಂದು ಹಂತದಲ್ಲಿ 170ರ ಗಡಿ ತಲಪುವ ನಿರೀಕ್ಷೆ ಹುಟ್ಟಿಸಿದ್ದ ಡೆಲ್ಲಿಗೆ ಭಾರೀ ಬ್ರೇಕ್‌ ಬಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಬೇರ್‌ಸ್ಟೊ ಬಿ ಅಹ್ಮದ್‌ 4
ಶಿಖರ್‌ ಧವನ್‌ ಸಿ ಭುವನೇಶ್ವರ್‌ ಬಿ ಅಹ್ಮದ್‌ 7
ಕಾಲಿನ್‌ ಮುನ್ರೊ ಸಿ ಬೇರ್‌ಸ್ಟೊ ಬಿ ಅಭಿಷೇಕ್‌ 40
ಶ್ರೇಯಸ್‌ ಅಯ್ಯರ್‌ ಸಿ ಬೇರ್‌ಸ್ಟೊ ಬಿ ಭುವನೇಶ್ವರ್‌ 45
ರಿಷಬ್‌ ಪಂತ್‌ ಸಿ ಹೂಡಾ ಬಿ ಅಹ್ಮದ್‌ 23
ಕ್ರಿಸ್‌ ಮಾರಿಸ್‌ ಬಿ ರಶೀದ್‌ 4
ಅಕ್ಷರ್‌ ಪಟೇಲ್‌ ಔಟಾಗದೆ 14
ಕೀಮೊ ಪೌಲ್‌ ಎಲ್‌ಬಿಡಬ್ಲ್ಯು ಭುವನೇಶ್ವರ್‌ 7
ಕಾಗಿಸೊ ರಬಾಡ ಔಟಾಗದೆ 2
ಇತರ 9
ಒಟ್ಟು (7 ವಿಕೆಟಿಗೆ) 155
ವಿಕೆಟ್‌ ಪತನ: 1-11, 2-20, 3-69, 4-125, 5-127, 6-133, 7-152.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-33-2
ಖಲೀಲ್‌ ಅಹ್ಮದ್‌ 4-0-30-3
ಸಂದೀಪ್‌ ಶರ್ಮ 4-0-30-0
ದೀಪಕ್‌ ಹೂಡಾ 1-0-8-0
ಅಭಿಷೇಕ್‌ ಶರ್ಮ 1-0-10-1
ವಿಜಯ್‌ ಶಂಕರ್‌ 2-0-17-0
ರಶೀದ್‌ ಖಾನ್‌ 4-0-33-1

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಸಿ ಅಯ್ಯರ್‌ ಬಿ ರಬಾಡ 51
ಜಾನಿ ಬೇರ್‌ಸ್ಟೊ ಸಿ ರಬಾಡ ಬಿ ಪೌಲ್‌ 41
ಕೇನ್‌ ವಿಲಿಯಮ್ಸನ್‌ ಸಿ ರಬಾಡ ಬಿ ಪೌಲ್‌ 3
ರಿಕ್ಕಿ ಭುಯಿ ಸಿ ಪಂತ್‌ ಬಿ ಪೌಲ್‌ 7
ವಿಜಯ್‌ ಶಂಕರ್‌ ಸಿ ಪಂತ್‌ ಬಿ ರಬಾಡ 1
ದೀಪಕ್‌ ಹೂಡ ಬಿ ಮಾರಿಸ್‌ 3
ಅಭಿಷೇಕ್‌ ಶರ್ಮ ಸಿ ಪೌಲ್‌ ಬಿ ಮಾರಿಸ್‌ 2
ರಶೀದ್‌ ಖಾನ್‌ ಸಿ ಪೌಲ್‌ ಬಿ ಮಾರಿಸ್‌ 0
ಭುವನೇಶ್ವರ್‌ ಕುಮಾರ್‌ ಸಿ ಮತ್ತು ಬಿ ರಬಾಡ 2
ಸಂದೀಪ್‌ ಶರ್ಮ ಔಟಾಗದೆ 1
ಖಲೀಲ್‌ ಅಹಮ್ಮದ್‌ ಬಿ ರಬಾಡ 0
ಇತರ 5
ಒಟ್ಟು (18.5 ಓವರ್‌ಗಳಲ್ಲಿ ಆಲೌಟ್‌) 116
ವಿಕೆಟಟ್‌ ಪತನ: 1,72, 2-78, 3-101, 4-106, 5-106, 6-110, 7-110, 8-112, 9-116
ಬೌಲಿಂಗ್‌: ಇಶಾಂತ್‌ ಶರ್ಮ 3-0-19-0
ಕಾಗಿಸೊ ರಬಾಡ 3.5-0-22-4
ಕ್ರಿಸ್‌ ಮಾರಿಸ್‌ 3-0-22-3
ಅಕ್ಷರ್‌ ಪಟೇಲ್‌ 2-0-23-0
ಕೀಮೊ ಪೌಲ್‌ 4-0-17-3
ಅಮಿತ್‌ ಮಿಶ್ರಾ 3-0-13-0

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ