IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ
Team Udayavani, Mar 29, 2024, 6:43 AM IST
ಮುಂಬಯಿ: ಈ ಬಾರಿಯ ಐಪಿಎಲ್ ಉದ್ಘಾಟನ ಸಮಾರಂಭವನ್ನು, ಸ್ಟಾರ್ ಸ್ಪೋರ್ಟ್ಸ್ ಲ್ಲಿ ದಾಖಲೆಯ 16.8 ಕೋಟಿ ಮಂದಿ ವೀಕ್ಷಿಸಿದ್ದಾರೆ. ಹೀಗೆಂದು ಕೂಟದ ಅಧಿಕೃತ ಪ್ರಸಾರ ವಾಹಿನಿ ಸ್ಟಾರ್ ನ್ಪೋರ್ಟ್ಸ್ ಹೇಳಿದೆ. ಚೆನ್ನೈಯಲ್ಲಿ ಮಾರ್ಚ್ 22ರಂದು ಚೆನ್ನೈ ಸೂಪರ್ ಕಿಂಗ್ಸ್-ಆರ್ಸಿಬಿ ನಡುವೆ ನಡೆದಿದ್ದ ಉದ್ಘಾಟನ ಪಂದ್ಯವನ್ನು, 16.8 ಕೋಟಿ ಮಂದಿ ವೀಕ್ಷಿಸಿದ್ದಾರೆ.
2023ರಲ್ಲಿ 14 ಕೋಟಿ ಮಂದಿ ವೀಕ್ಷಿಸಿದ್ದರು. ಒಟ್ಟು 1,276 ಕೋಟಿ ನಿಮಿಷಗಳಷ್ಟು ವೀಕ್ಷಣೆಯಾಗಿದೆ. 2023ರಲ್ಲಿ 870 ಕೋಟಿ ನಿಮಿಷ ವೀಕ್ಷಿಸಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿಯದ್ದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವೀಕ್ಷಣ ಸಮಯ ಎಂದು ಡಿಸ್ನಿ ಸ್ಟಾರ್ ಹೇಳಿದೆ. ಉದ್ಘಾಟನೆಯ ದಿನ 6.1 ಕೋಟಿ ವೀಕ್ಷಕರು ಏಕಕಾಲದಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಇದೂ ಕೂಡ ದಾಖಲೆಯಾಗಿದೆ.
ಐಪಿಎಲ್ ನಿಜಕ್ಕೂ ಕ್ರಿಕೆಟ್ಟಾ?: ಆರ್.ಅಶ್ವಿನ್ ಅಚ್ಚರಿ
ಕೆಲವು ಬಾರಿ ನನಗೆ ಐಪಿಎಲ್ ಕ್ರಿಕೆಟ್ ಹೌದಾ ಅಂತ ಅಚ್ಚರಿಯಾಗುತ್ತದೆ ಎಂದು ಖ್ಯಾತ ಆಟಗಾರ ಆರ್.ಅಶ್ವಿನ್ ಹೇಳಿದ್ದಾರೆ. “ಐಪಿಎಲ್ ಅಷ್ಟು ಬೃಹತ್ತಾಗಿ ಬೆಳದಿದೆ. ಯುವಕನಾಗಿ ಕೂಟಕ್ಕೆ ಪ್ರವೇಶಿಸಿದ್ದಾಗ, ಹಿರಿಯ ಆಟಗಾರರಿಂದ ಕಲಿಯಲು ಬಯಸುತ್ತಿದ್ದೆ. ಈಗ ನಾವು ಜಾಹೀರಾತು ಶೂಟಿಂಗ್ಗಾಗಿ ಅಭ್ಯಾಸ ಮಾಡುತ್ತ ನಮ್ಮ ಸಮಯ ವನ್ನು ಕಳೆದುಬಿಡುತ್ತೇವೆ. ಐಪಿಎಲ್ ಇಲ್ಲಿಗೆ ಬಂದು ನಿಂತಿದೆ ಎಂದು ಅಶ್ವಿನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?