IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Team Udayavani, Apr 18, 2024, 7:25 AM IST

1eqqewe

ಮುಲ್ಲಾನ್‌ಪುರ್‌ (ಚಂಡೀಗಢ): ತೀರಾ ಕೆಳಹಂತದಲ್ಲಿದ್ದು, ಒಂದೇ ದೋಣಿಯಲ್ಲಿ ಪಯ ಣಿಸು ತ್ತಿರುವ ಪಂಜಾಬ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ಗುರುವಾರ ಮುಖಾಮುಖಿಯಾಗಲಿವೆ. ಪಂಜಾಬ್‌ನ ನೂತನ ಹೋಮ್‌ ಗ್ರೌಂಡ್‌ ಆಗಿರುವ ಮುಲ್ಲಾನ್‌ಪುರ್‌ನಲ್ಲಿ ಈ ಮಹತ್ವದ ಮುಖಾಮುಖಿ ಸಾಗಲಿದೆ.

ಪಂಜಾಬ್‌ ಮತ್ತು ಮುಂಬೈ ತಲಾ 6 ಪಂದ್ಯಗಳ ನ್ನಾಡಿದ್ದು, ಎರಡರಲ್ಲಷ್ಟೇ ಜಯ ಸಾಧಿಸಿವೆ. ನಾಲ್ಕರಲ್ಲಿ ಸೋತಿವೆ. ಪಂಜಾಬ್‌ ರನ್‌ರೇಟ್‌ನಲ್ಲಿ ತುಸು ಮುಂದಿ ರುವ ಕಾರಣ 7ನೇ ಸ್ಥಾನದಲ್ಲಿದೆ. ಮುಂಬೈ 8ನೇ ಸ್ಥಾನಿ ಯಾಗಿದೆ. ಪ್ಲೇ ಆಫ್ ಪ್ರವೇಶ ಲಭಿಸಬೇಕಾದರೆ ಎರಡೂ ತಂಡಗಳು ಇಲ್ಲಿಂದ ಮೊದಲ್ಗೊಂಡು ಸಾಧ್ಯವಾದಷ್ಟು ಹೆಚ್ಚು ಗೆಲುವನ್ನು ಸಾಧಿಸಬೇಕಿದೆ. ಹೀಗಾಗಿ ಎರಡೂ ತಂಡಗಳ ಮೇಲೆ ಭಾರೀ ಪ್ರಮಾಣದ ಒತ್ತಡವಿದೆ.

ವಿಪರೀತ ಒತ್ತಡದಲ್ಲಿ ಮುಂಬೈ
ಚಾಂಪಿಯನ್‌ ಚೆನ್ನೈ ವಿರುದ್ಧ ವಾಂಖೇಡೆಯಲ್ಲೇ ಮುಗ್ಗರಿಸಿರುವ ಮುಂಬೈ ಭಾರೀ ಒತ್ತಡದಲ್ಲಿದೆ. ಮಾಜಿ ನಾಯಕ ರೋಹಿತ್‌ ಶರ್ಮ ಅವರೇನೋ ಶತಕ ಬಾರಿಸಿ ಸೇಫ್ ಝೋನ್‌ನಲ್ಲಿದ್ದಾರೆ. ಆದರೆ ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಮಿಶ್ರ ಫ‌ಲ ಅನುಭವಿಸುತ್ತಿದ್ದಾರೆ. ತಿಲಕ್‌ ವರ್ಮ, ಟಿಮ್‌ ಡೇವಿಡ್‌ ಕೂಡ ಇದೇ ಸಾಲಿನಲ್ಲಿದ್ದಾರೆ. ರೊಮಾರಿಯೊ ಶೆಫ‌ರ್ಡ್‌ ಅಬ್ಬರ ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್‌ ಪಾಂಡ್ಯ ಅವರ ನಾಯ ಕತ್ವದ ಮೇಲೆ ಯಾರಿಗೂ ಸಮಾಧಾನ ವಿದ್ದಂತಿಲ್ಲ. ಸ್ವತಃ ಪಾಂಡ್ಯ ಕೂಡ ಕೆಲವು ಎಡವಟ್ಟು ನಿರ್ಧಾರಗಳಿಂದ ಹೊಡೆತ ಅನುಭವಿಸುತ್ತಿದ್ದಾರೆ. ಉದಾಹರಣೆಗೆ, ಚೆನ್ನೈ ವಿರುದ್ಧ ಕೊನೆಯ ಓವರ್‌ ಎಸೆದದ್ದು, ಶ್ರೇಯಸ್‌ ಗೋಪಾಲ್‌ಗೆ ಒಂದೇ ಓವರ್‌ ನೀಡಿದ್ದು… ಇತ್ಯಾದಿ.ಬೌಲಿಂಗ್‌ನಲ್ಲಿ ಬುಮ್ರಾ, ಕೋಟ್ಜಿ ಮತ್ತು ಮಧ್ವಾಲ್‌ ಪರಿ ಣಾಮ ಬೀರುತ್ತಿದ್ದಾರೆ.

ಅದೃಷ್ಟ ತಾರದ ಅಂಗಳ
ಪಂಜಾಬ್‌ಗೆ ಇದು ತವರಿನ ಅಂಗಳವಾದರೂ ಈವರೆಗೆ ಅದೃಷ್ಟವನ್ನು ಮೊಗೆದು ಕೊಟ್ಟಿಲ್ಲ. ರಾಜಸ್ಥಾನ್‌ ವಿರುದ್ಧ ಇಲ್ಲಿ ಆಡಿದ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿ 3 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು. ನಾಯಕ ಧವನ್‌ ಗೈರಲ್ಲಿ ಆಡಲಿಳಿದ ಪಂಜಾಬ್‌ಗೆ ಗಳಿ ಸಲು ಸಾಧ್ಯವಾದದ್ದು 8 ವಿಕೆಟಿಗೆ 147 ರನ್‌ ಮಾತ್ರ.

ಸದ್ಯ ಪಂಜಾಬ್‌ಗೆ ಓಪನಿಂಗ್‌ನಲ್ಲಿ ಹಿನ್ನಡೆ ಆಗುತ್ತಿದ್ದರೂ ಬ್ಯಾಟಿಂಗ್‌ ಲೈನ್‌ಆಪ್‌ ಉತ್ತಮ ವಾಗಿಯೇ ಇದೆ. ಆದರೆ ಯಾರೂ ಒಂದು ತಂಡವಾಗಿ, ಗಟ್ಟಿಯಾಗಿ ನಿಂತು ಆಡುತ್ತಿಲ್ಲ. ಪ್ರಭ್‌ಸಿಮ್ರಾನ್‌ ಸಿಂಗ್‌ (119 ರನ್‌), ಜಿತೇಶ್‌ ಶರ್ಮ (106 ರನ್‌), ಆಲ್‌ರೌಂಡರ್‌ ಸ್ಯಾಮ್‌ ಕರನ್‌ (126 ರನ್‌) ಪ್ರಯತ್ನ ಸಾಲದು. ಹಾಗೆಯೇ ಲಿವಿಂಗ್‌ಸ್ಟೋನ್‌, ಸಿಕಂದರ್‌ ರಝ ಛಾತಿಗೆ ತಕ್ಕ ಪ್ರದರ್ಶನ ನೀಡಿಲ್ಲ. ಯುವ ಬ್ಯಾಟರ್‌ಗಳಾದ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್‌ ಶರ್ಮ ಜೋಡಿಯಷ್ಟೇ ಭರವಸೆ ಮೂಡಿಸಿದೆ.

ಪಂಜಾಬ್‌ ಬೌಲಿಂಗ್‌ ಈವರೆಗೆ ಘಾತಕವಾಗಿ ಪರಿಣಮಿ ಸಿಲ್ಲ. ಮುಲ್ಲಾನ್‌ಪುರ್‌ ಟ್ರ್ಯಾಕ್‌ ನಿಧಾನ ಗತಿ ಹೊಂದಿರುವ ಕಾರಣ ಇಲ್ಲಿ ಬೌಲರ್‌ಗಳಿಗೆ ಯಶಸ್ಸು ಅಧಿಕ. ರಬಾಡ, ಅರ್ಷದೀಪ್‌, ಕರನ್‌, ಬ್ರಾರ್‌ ಅದೆಂಥ ಮ್ಯಾಜಿಕ್‌ ಮಾಡಬಲ್ಲರು ಎಂಬುದನ್ನು ಕಾದು ನೋಡಬೇಕಿದೆ.

ಟಾಪ್ ನ್ಯೂಸ್

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.