IPL; ಎಸ್ಆರ್ಎಚ್ನಿಂದ ಬ್ರೇಕ್ ಪಡೆದ ಸ್ಟೇನ್: ಲಕ್ನೋಗೆ ಕ್ಲೂಸ್ನರ್ ಸಹಾಯಕ ಕೋಚ್
Team Udayavani, Mar 3, 2024, 6:00 AM IST
ಹೈದರಾಬಾದ್: ಈ ಬಾರಿಯ ಐಪಿಎಲ್ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಸನ್ರೈಸರ್ ಹೈದರಾಬಾದ್ನ ಕೋಚಿಂಗ್ ತಂಡದ ಸದಸ್ಯರಾಗಿರುವುದಿಲ್ಲ. ಒಂದು ವರ್ಷದ ಮಟ್ಟಿಗೆ ಬ್ರೇಕ್ ಪಡೆದಿದ್ದು, 2025ರ ಐಪಿಎಲ್ಗೆ ಮರಳುವ ಯೋಜನೆ ಹಾಕಿಕೊಂಡಿದ್ದಾರೆ.
ಎರಡೂ ಹೈದರಾಬಾದ್ ತಂಡಗಳ ಪರ ಆಡಿದ್ದ (ಡೆಕ್ಕನ್ ಚಾರ್ಜರ್, ಎಸ್ಆರ್ಎಚ್) ಡೇಲ್ ಸ್ಟೇನ್, ಬಳಿಕ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2022ರಲ್ಲಿ ಎಸ್ಆರ್ಎಚ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡರು.
ಲಕ್ನೋಗೆ ಕ್ಲೂಸ್ನರ್ ಸಹಾಯಕ ಕೋಚ್
ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ 2024ರ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯದ ಜಸ್ಟಿನ್ ಲ್ಯಾಂಗರ್ ಈ ತಂಡದ ಪ್ರಧಾನ ಕೋಚ್ ಆಗಿದ್ದಾರೆ.
“ಸೌತ್ ಆಫ್ರಿಕಾ 20′ ಲೀಗ್ನಲ್ಲಿ ಲಕ್ನೋ ಫ್ರಾಂಚೈಸಿ ಆಗಿದ್ದ “ಡರ್ಬನ್ ಸೂಪರ್ ಜೈಂಟ್ಸ್’ ತಂಡಕ್ಕೆ ಕ್ಲೂಸ್ನರ್ ಹೆಡ್ ಕೋಚ್ ಆಗಿದ್ದರು.
ಲ್ಯಾನ್ಸ್ ಕ್ಲೂಸ್ನರ್ ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೂ ಕೋಚಿಂಗ್ ನೀಡಿದ್ದರು. 2023ರ ಕೆರಿಬಿಯನ್ ಪ್ರೀಮಿಯರ್ ಲೀಗ್ ವೇಳೆ ಗಯಾನಾ ಅಮೆಜಾನ್ ವಾರಿಯರ್ ತಂಡದ ಕೋಚ್ ಕೂಡ ಆಗಿದ್ದರು. ಅಂದು ಗಯಾನ ಮೊದಲ ಬಾರಿಗೆ ಸಿಪಿಎಲ್ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ