ಇಟಲಿ ಟೆನಿಸ್‌: ಫೆಡರರ್‌, ನಡಾಲ್, ಜೊಕೊಗೆ ಜಯ

Team Udayavani, May 17, 2019, 6:00 AM IST

ರೋಮ್‌: ಮಳೆಯಿಂದ ಅಡಚಣೆಗೊಳಗಾದ ಇಟಾಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಸ್ಟಾರ್‌ ಆಟಗಾರರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್ ಮತ್ತು ನೊವಾಕ್‌ ಜೊಕೋವಿಕ್‌ಮುನ್ನಡೆ ಸಾಧಿಸಿದ್ದಾರೆ.


2016ರ ಬಳಿಕ ಇದೇ ಮೊದಲ ಬಾರಿಗೆ ರೋಮ್‌ ಕೂಟದಲ್ಲಿ ಸ್ಪರ್ಧೆಗಿಳಿದಿರುವ ರೋಜರ್‌ ಫೆಡರರ್‌ ಪೋರ್ಚುಗಲ್ನ ಜೋ ಸೂಸ ಅವರನ್ನು 6-4, 6-3ರಿಂದ ಮಣಿಸಿ 16ರ ಸುತ್ತಿಗೆ ಏರಿದರು. ಇವರ ಮುಂದಿನ ಎದುರಾಳಿ ಕ್ರೊವೇಷ್ಯಾದ ಬೊರ್ನಾ ಕೊರಿಕ್‌. ಫೆಡರರ್‌ ಈ ಬಾರಿ ಆಡಲಿರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕೂಟದ ಸಂಘಟಕರು ಟಿಕೆಟ್ ಬೆಲೆಯನ್ನು ದುಪ್ಪಟುಗೊಳಿಸಿದ್ದರು! ರಪಾಯೆಲ್ ನಡಾಲ್ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು 6-0, 6-1 ಅಂತರದಿಂದ ಸುಲಭದಲ್ಲಿ ಮಣಿಸಿದರು. ಮುಂದೆ ಜಾರ್ಜಿಯಾದ ನಿಕೋಲಸ್‌ ಬಸಿಲಶ್ವಿ‌ಲಿ ವಿರುದ್ಧ ಆಡಲಿದ್ದಾರೆ. ಕಳೆದ ವಾರವಷ್ಟೇ ಮ್ಯಾಡ್ರಿಡ್‌ ಪ್ರಶಸ್ತಿ ಜಯಿಸಿದ ನೊವಾಕ್‌ ಜೊಕೊವಿಚ್ ಕೆನಡಾದ ಡೆನಿಸ್‌ ಶಪೊವ್ಯಾಲೊವ್‌ ವಿರುದ್ಧ 6-1, 6-3 ಅಂತರದ ಗೆಲುವು ಸಾಧಿಸಿದರು.

ಮಹಿಳಾ ಸಿಂಗಲ್ಸ್: ಒಸಾಕಾ 3ನೇ ಸುತ್ತಿಗೆ

ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವದ ನಂ.1 ತಾರೆ ಜಪಾನಿನ ನವೊಮಿ ಒಸಾಕಾ 3ನೇ ಸುತ್ತಿಗೆ ಏರಿದ್ದಾರೆ. ಅವರು ಸ್ಲೊವೇಕಿಯದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ 6-3, 6-3 ಅಂತರದ ಗೆಲುವು ಸಾಧಿಸಿದರು. ಮಳೆಯಿಂದಾಗಿ ಈ ಪಂದ್ಯ ಒಂದು ದಿನ ಮುಂದೂಡಲ್ಪಟ್ಟಿತ್ತು. ಮುಂದಿನ ಸುತ್ತಿನಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್‌ ಅಥವಾ ರೊಮೇನಿಯಾದ ಸಿಮೋನಾ ಹಾಲೆಪ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಗಾರ್ಬಿನ್‌ ಮುಗುರುಜಾ ಅಮೆರಿಕದ ಡೇನಿಯಲ್ ಕಾಲಿನ್ಸ್‌ ವಿರುದ್ಧ 6-4, 4-6, 6-2ರಿಂದ ಗೆದ್ದು ಬಂದರು. ಕಿಕಿ ಬರ್ಟೆನ್ಸ್‌, ಕ್ರಿಸ್ಟಿನಾ ಲಡೆನೊವಿಕ್‌ ಕೂಡ ಮುನ್ನಡೆ ಕಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ