ಬಾಂಗ್ಲಾಕ್ಕೆ ವಿಶ್ವಕಪ್ವರೆಗೆ ಜೋಶಿ ಬೌಲಿಂಗ್ ಸಲಹೆಗಾರ
Team Udayavani, Nov 27, 2018, 6:00 AM IST
ಢಾಕಾ: ಕರ್ನಾಟಕ ಕ್ರಿಕೆಟಿಗ, ಮಾಜಿ ಭಾರತ ತಂಡದ ಸ್ಪಿನ್ ಬೌಲರ್ ಸುನೀಲ್ ಜೋಶಿ ಮುಂಬರುವ 2019ರ ವಿಶ್ವಕಪ್ ಕೂಟದ ತನಕ ಬಾಂಗ್ಲಾದೇಶ ತಂಡಕ್ಕೆ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಜೋಶಿ ಜತೆಗಿನ ಒಪ್ಪಂದವನ್ನು ಮುಂದುವರಿಸುವುದಾಗಿ ಘೋಷಿಸಿದೆ.
ಇದೊಂದು ದೊಡ್ಡ ಅವಕಾಶ. ನನ್ನ ಮೇಲಿಟ್ಟಿರುವ ನಂಬಿಕೆಗಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಚಿತ್ತಗಾಂಗ್ನಿಂದ ಸುನೀಲ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಜೋಶಿ 2017ರಿಂದ ಬಾಂಗ್ಲಾಕ್ಕೆ ಸ್ಪಿನ್ ಬೌಲಿಂಗ್ ಸಲಹೆ ನೀಡುತ್ತಿದ್ದಾರೆ. 1996ರಿಂದ 2001ರ ತನಕ ಭಾರತ ಕ್ರಿಕೆಟ್ ತಂಡವನ್ನು ಏಕದಿನ ಕ್ರಿಕೆಟ್ ಕೂಟದಲ್ಲಿ ಜೋಶಿ ಪ್ರತಿನಿಧಿಸಿದ್ದರು. ಪ್ರಸ್ತುತ ಬಾಂಗ್ಲಾ ತವರಿನಲ್ಲಿ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ