Kabaddi; ಅಖಿಲ ಭಾರತ ಅಂತರ್ ವಿವಿ ಕಬಡ್ಡಿ: ಸೆಮಿಫೈನಲ್ಗೆ ಮಂಗಳೂರು ವಿವಿ
Team Udayavani, Nov 25, 2023, 11:48 PM IST
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಆತಿಥೇಯ ಮಂಗಳೂರು ವಿವಿ ತಂಡ 3ನೇ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮಂಗಳೂರು ವಿವಿ ತಂಡವು ರಾಜಸ್ಥಾನದ ಕೋಟ ವಿವಿ ತಂಡವನ್ನು 46-31 ಅಂಕಗಳಿಂದ ಸೋಲುಣಿಸಿತು. ಇನ್ನುಳಿದ ಕ್ವಾರ್ಟರ್ ಪೈನಲ್ ಪಂದ್ಯಗಳಲ್ಲಿ ಪಂಜಾಬ್ನ ಗುರುಕಾಶಿ ವಿವಿ ತಂಡವನ್ನು ಹರ್ಯಾದ ಚೌಧರಿ ಬನ್ಸಿಲಾಲ್ ವಿವಿ ತಂಡ 35-39 ಅಂಕಗಳಿಂದ ಸೋಲಿಸಿದೆ. ಔರಂಗಬಾದ್ನ ಡಾ| ಬಿಎಎಂ ವಿವಿ ಮತ್ತು ಚೆನ್ನೈನ ವೇಲ್ಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡದ ನಡುವೆ ಆರಂಭದಲ್ಲಿ ಸಮಬಲದ ಹೋರಾಟ (35-35) ನಡೆದು, ಹೆಚ್ಚುವರಿ ಅವಧಿಯಲ್ಲಿ ವೆಲ್ಸ್ ತಂಡ 7 (7-5) ಅಂಕಗಳೊಂದಿಗೆ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು. ಹರಿಯಾಣದ ಮಹರ್ಷಿ ದಯಾನಂದ ವಿವಿ ತಂಡವು ಎಸ್ಜೆಐಟಿ ವಿವಿ ತಂಡವನ್ನು 43-31 ಅಂಕಗಳಿಂದ ಸೋಲಿಸಿದೆ.
ಇಂದು ಸಮಾರೋಪ
ನ. 26ರಂದು ಮಂಗಳೂರು ವಿ.ವಿ. ಮತ್ತು ಹರ್ಯಾಣದ ಚೌಧರಿ ಬನ್ಸಿಲಾಲ್ ವಿವಿ ಹಾಗೂ ಚೆನ್ನೈನ ವೇಲ್ಸ್ ಮತ್ತು ಹರ್ಯಾಣದ ಮಹರ್ಷಿ ದಯಾನಂದ ವಿವಿ ತಂಡಗಳ ನಡುವೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾಟ ನಡೆಯಲಿದೆ. ಇದರ ಜತೆಗೆ ಪ್ರಶಸ್ತಿ ಪ್ರದಾನ, ಸಮಾರೋಪ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ