ಪಂತ್‌ಗೆ ಕೀಪಿಂಗ್‌ ಸಲಹೆ ನೀಡಿದ ಸಂಗಕ್ಕರ

Team Udayavani, Nov 9, 2019, 5:29 AM IST

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಯುವ ಕೀಪರ್‌ ರಿಷಭ್‌ ಪಂತ್‌ಗೆ ಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಕೀಪಿಂಗ್‌ ಸಲಹೆ ನೀಡಿದ್ದಾರೆ.

ಪಂತ್‌ ಮೊದಲ ಪಂದ್ಯದಲ್ಲಿ ಕೆಲವು ಎಡವಟ್ಟು ಮಾಡಿ ಟೀಕೆಗೆ ಗುರಿಯಾಗಿದ್ದರು. ದ್ವಿತೀಯ ಪಂದ್ಯದಲ್ಲೂ ಇಂತಹ ಎಡವಟ್ಟು ಮುಂದುವರಿಸಿ ಮತ್ತೆ ಟೀಕೆಗೊಳಗಾಗಿದ್ದಾರೆ. ಚೆಂಡನ್ನು ಸ್ಟಂಪ್‌ ರೇಖೆಗಿಂತ ಬಹಳ ಮುಂದೆ “ಕಲೆಕ್ಟ್’ ಮಾಡಿ ಲಿಟನ್‌ ದಾಸ್‌ ಅವರಿಗೆ “ಸ್ಟಂಪ್ಡ್ ಲೈಫ್’ ನೀಡಿದರು. ನಿಯಮ ಪ್ರಕಾರ ಇದಕ್ಕೆ ನೋಬಾಲ್‌ ಹಾಗೂ ಫ್ರೀ ಹಿಟ್‌ ನೀಡಲಾಯಿತು.

“ಪಂತ್‌ ತಮ್ಮ ಅವಸರದ ಆಟವಾಡುವುದನ್ನು ನಿಲ್ಲಿಸಿ ತಾಳ್ಮೆಯುತ ಆಟವಾಡಬೇಕು ಮತ್ತು ಇತರರ ಶೈಲಿಯನ್ನು ಅನುಕರಣೆ ಮಾಡಲು ಹೋಗುವುದರಿಂದ ಅವರು ಕೀಪಿಂಗ್‌ನಲ್ಲಿ ಎಡವುತ್ತಿದ್ದಾರೆ’ ಎಂದು ಸಂಗಕ್ಕರ ಸಲಹೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ