ಸೈಯದ್ ಮುಷ್ತಾಕ್‌ನಲ್ಲಿ ಶಾ?
Team Udayavani, Nov 9, 2019, 5:19 AM IST
ಮುಂಬಯಿ: ಉದ್ದೀಪನ ಮದ್ದು ಸೇವನೆ ಮಾಡಿ 8 ತಿಂಗಳು ಕ್ರಿಕೆಟ್‌ನಿಂದ ಅಮಾನತಾಗಿದ್ದ ಭಾರತ ಕ್ರಿಕೆಟ್ ತಂಡದ ಖ್ಯಾತ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಮತ್ತೆ ಕ್ರಿಕೆಟಿಗೆ ಮರಳಲು ವೇದಿಕೆ ಸಿದ್ಧವಾಗಿದೆ.
ನ.16ರಿಂದ ಅವರು ಮತ್ತೆ ಕ್ರಿಕೆಟಿಗೆ ಮರಳಲು ಅಡ್ಡಿಯಿಲ್ಲ ಎಂದು ಮುಂಬಯಿ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಶಾ ಅವರು ಮುಂಬಯಿ ಪರ ಸಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಆಡಲು ಅವಕಾಶವಿದೆ. ಆದರೆ ಅವರನ್ನು ಆಯ್ಕೆ ಮಾಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದೂ ಮುಂಬಯಿ ಕ್ರಿಕೆಟ್ ಸಂಸ್ಥೆ ಹೇಳಿದೆ. ಸದ್ಯ ಮುಂಬಯಿ ತಂಡದ ಕ್ರಿಕೆಟಿಗರಾದ ಶ್ರೇಯಸ್, ಶಾದೂìಲ್, ದುಬೆ ಭಾರತ ಪರ ಆಡುತ್ತಿದ್ದಾರೆ. ಆದ್ದರಿಂದ ಪೃಥ್ವಿ ಶಾಗೆ ಅವಕಾಶವೊಂದಿದೆ.