ನೆಗೆಟಿವ್ ಹೊರತಾಗಿಯೂ ಯುಎಸ್ ಓಪನ್ ಕೂಟದಿಂದ ದೂರ ಉಳಿಯಲಿರುವ ಟೆನಿಸಿಗ ನಿಶಿಕೊರಿ
Team Udayavani, Aug 27, 2020, 8:27 PM IST
ನ್ಯೂಯಾರ್ಕ್: ಜಪಾನ್ ಟೆನಿಸಿಗ ಕೀ ನಿಶಿಕೊರಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಅವರ ಫಲಿತಾಂಶವೀಗ ನೆಗೆಟಿವ್ ಬಂದಿದೆ. ಆದರೂ ಮುಂಬರುವ ಯುಎಸ್ ಓಪನ್ ಪಂದ್ಯಾವಳಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
“ನಾನೀಗ ನಿಧಾನವಾಗಿ ಅಭ್ಯಾಸ ಆರಂಭಿಸಲು ಸಜ್ಜಾಗಿದ್ದೇನೆ. ಆದರೆ ಪೂರ್ತಿಯಾಗಿ ಗುಣಮುಖವಾಗದೆ 5 ಸೆಟ್ಗಳ ಪಂದ್ಯಗಳನ್ನಾಡಲು ಕಾಲವಿದು ಪಕ್ವವಲ್ಲ. ಯುಎಸ್ ಓಪನ್ನಿಂದ ದೂರ ಸರಿಯುವುದು ಅನಿವಾರ್ಯ’ ಎಂದು ನಿಶಿಕೊರಿ ಹೇಳಿದ್ದಾರೆ. “ನಾನು ಯುಎಸ್ ಓಪನ್ ಕೂಟವನ್ನು ತುಂಬಾ ಪ್ರೀತಿಸುತ್ತೇನೆ. ಅಲ್ಲಿ ಅನೇಕ ಸ್ಮರಣೀಯ ನೆನಪುಗಳಿವೆ. ಬೇಸರವಾಗುತ್ತಿದೆ. ಕ್ಲೇ ಕೋರ್ಟ್ ಮೂಲಕ ಮರಳಿ ಆಟ ಆರಂಭಿಸುತ್ತೇನೆ. ಥ್ಯಾಂಕ್ ಯೂ’ ಎಂದು ಕೀ ನಿಶಿಕೊರಿ ಟ್ವೀಟ್ ಮಾಡಿದ್ದಾರೆ.