ಬಾಂಗ್ಲಾದೇಶ ವಿರುದ್ಧ ವಿಂಡೀಸ್ ಗೆ 7 ವಿಕೆಟ್ ವಿಕ್ಟರಿ
Team Udayavani, Jun 20, 2022, 7:05 PM IST
ನಾರ್ತ್ ಸೌಂಡ್ (ಆಂಟಿಗಾ): ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 7 ವಿಕೆಟ್ಗಳ ಗೆಲುವು ಸಾಧಿಸಿದೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ವೆಸ್ಟ್ ಇಂಡೀಸ್ ಜಯಕ್ಕೆ 84 ರನ್ನುಗಳ ಸುಲಭ ಗುರಿ ಲಭಿಸಿತ್ತು. ಆದರೆ 3 ವಿಕೆಟ್ಗಳನ್ನು 9 ರನ್ ಮಾಡುವಷ್ಟರಲ್ಲಿ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. 4ನೇ ವಿಕೆಟಿಗೆ ಜತೆಗೂಡಿದ ಜಾನ್ ಕ್ಯಾಂಬೆಲ್ (ಅಜೇಯ 58) ಮತ್ತು ಜರ್ಮೈನ್ ಬ್ಲ್ಯಾಕ್ವುಡ್ (ಅಜೇಯ 26) ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ತಡೆದರು. 22 ಓವರ್ಗಳಲ್ಲಿ 3 ವಿಕೆಟಿಗೆ 88 ರನ್ ಬಾರಿಸಿ ಗೆದ್ದು ಬಂದಿತು. ಒಟ್ಟು 7 ವಿಕೆಟ್ ಉರುಳಿಸಿದ ವೇಗಿ ಕೆಮರ್ ರೋಚ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸರಣಿಯ ದ್ವಿತೀಯ ಟೆಸ್ಟ್ ಜೂ. 24ರಂದು ಗ್ರಾಸ್ ಐಲೆಟ್ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-103 ಮತ್ತು 245. ವೆಸ್ಟ್ ಇಂಡೀಸ್-265 ಮತ್ತು 3 ವಿಕೆಟಿಗೆ 88. ಪಂದ್ಯಶ್ರೇಷ್ಠ: ಕೆಮರ್ ರೋಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ