
ಸಲಿಂಗಿ ಪ್ರೇಯಸಿ ಜೊತೆ ಫೋಟೋ ಹಂಚಿಕೊಂಡ ದ್ಯುತಿ ಚಂದ್: ಮದುವೆ ವದಂತಿ
ಭಾರತದಲ್ಲಿ ಕ್ರೀಡಾಪಟುವೊಬ್ಬರು “ಗೇ” ಎಂದು ಘೋಷಿಸಿಕೊಂಡವರಲ್ಲಿ ದ್ಯುತಿ ಮೊದಲಿಗರು
Team Udayavani, Dec 3, 2022, 12:33 PM IST

ನವದೆಹಲಿ: ಭಾರತದ ಸ್ಟಾರ್ ಕ್ರೀಡಾಪಟು ದ್ಯುತಿ ಚಂದ್ ತನ್ನ ಗೆಳತಿ ಮೊನಾಲಿಸಾ ಅವರೊಂದಿಗೆ ಸಲಿಂಗಿ ಸಂಬಂಧದಲ್ಲಿರುವುದು ಗೊತ್ತೇ ಇದೆ. ಈಗ ದ್ಯುತಿ ಮೊನಾಲಿಸಾ ಅವರೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.
2019 ರಲ್ಲಿ ದ್ಯುತಿ ಚಂದ್ ತಾನು ʼಗೇʼ ಎಂದು ಘೋಷಿಸಿದ್ದರು. ಭಾರತದಲ್ಲಿ ಕ್ರೀಡಾಪಟುವೊಬ್ಬರು “ಗೇ” ಎಂದು ಘೋಷಿಸಿಕೊಂಡವರಲ್ಲಿ ದ್ಯುತಿ ಮೊದಲಿಗರು. ಈ ಸುದ್ದಿ ಆ ವೇಳೆಗೆ ಸಂಚಲನ ಸೃಷ್ಟಿಸಿತ್ತು. ದ್ಯುತಿ ಅವರ ಮನೆಯವರು ಕೂಡ ಮೊದಲಿಗೆ ಇದನ್ನು ಒಪ್ಪಿಕೊಂಡಿರಲಿಲ್ಲ.
ಇದನ್ನೂ ಓದಿ: ಚಾಲಕನಿಗೆ ಹೃದಯಾಘಾತ; ಅಡ್ಡಾದಿಡ್ಡಿಯಾಗಿ ವಾಹನಗಳ ಮೇಲೆ ಸವಾರಿ ಮಾಡಿದ ಬಸ್…
ಡಿ.2 ರಂದು ದ್ಯುತಿ ತನ್ನ ಪ್ರೇಯಸಿಯೊಂದಿಗೆ ಪೋಟೋವೊಂದನ್ನು ಹಂಚಿಕೊಂಡು “ಲವ್ ಇಸ್ ಲವ್” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋಗೆ ಕೆಲವರು ದ್ಯುತಿ ಅವರೇ ಮದುವೆಯಾಗಿದ್ದಾರೆ ಎಂದು ನಂಬಿ ಶುಭಾಶಯವನ್ನು ಕೋರುತ್ತಿದ್ದಾರೆ. ಇನ್ನು ಕೆಲವರು ಇಬ್ಬರು ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ವದಂತಿಗಳೂ ಹಬ್ಬಿವೆ.
ನಿನ್ನನ್ನು ನಿನ್ನೆ ಪ್ರೀತಿಸಿದೆ, ಈಗಲೂ ಪ್ರೀತಿಸಿದೆ,ಯಾವಾಗಲೂ ಪ್ರೀತಿಸುತ್ತಲೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮೊನಾಲಿಸಾ ಮದುವೆ ಹೆಣ್ಣಿನಂತೆ ಶೃಂಗಾರಗೊಂಡಿದ್ದು, ಸೂಟ್ ಬೂಟ್ ತೊಟ್ಟ ದ್ಯುತಿ ಅವರೊಂದಿಗೆ ಕುಳಿತು ಸುಂದರವಾಗಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ಕಾರಣದಿಂದ ಇದು ಇವರಿಬ್ಬರ ಮದುವೆ ಎನ್ನುವ ವದಂತಿ ಹಬ್ಬಿತ್ತು.
ದ್ಯುತಿ ಅವರ ತಂಗಿಯ ಮದುವೆ ಸಂಭ್ರಮದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಈ ಸಂತಸದ ಕ್ಷಣದಲ್ಲಿ ದ್ಯುತಿಯ ಪ್ರೇಯಸಿ ಕೂಡ ಭಾಗಿಯಾಗಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ