ಶ್ರೀಲಂಕಾ ತಂಡಕ್ಕೆ ಮರಳಿದ ಆವಿಷ್ಕ ಫೆರ್ನಾಂಡೊ
Team Udayavani, Dec 28, 2022, 11:42 PM IST
ಕೊಲಂಬೊ: ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾದ ಟಿ20 ಹಾಗೂ ಏಕದಿನ ತಂಡಗಳನ್ನು ಪ್ರಕಟಿಸಲಾಗಿದೆ. ಅಗ್ರ ಕ್ರಮಾಂಕದ ಬ್ಯಾಟರ್ ಆವಿಷ್ಕ ಫೆರ್ನಾಂಡೊ 11 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ.
ಎರಡೂ ತಂಡಗಳನ್ನು ದಸುನ್ ಶಣಕ ಮುನ್ನಡೆಸುವರು. ಟಿ20 ತಂಡಕ್ಕೆ ವನಿಂದು ಹಸರಂಗ, ಏಕದಿನಕ್ಕೆ ಕುಸಲ್ ಮೆಂಡಿಸ್ ಉಪನಾಯಕರಾಗಿದ್ದಾರೆ.
ಶ್ರೀಲಂಕಾ ತಂಡ: ದಸುನ್ ಶಣಕ (ನಾಯಕ), ಪಥುಮ್ ನಿಸ್ಸಂಕ, ಆವಿಷ್ಕ ಫೆರ್ನಾಂಡೊ, ಕುಸಲ್ ಮೆಂಡಿಸ್, ಭನುಕ ರಾಜಪಕ್ಸ (ಟಿ20ಗೆ ಮಾತ್ರ), ಚರಿತ ಅಸಲಂಕ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಅಶೇನ್ ಬಂಡಾರ, ಮಹೀಶ್ ತೀಕ್ಷಣ, ಜೆಫ್ರಿ ವಾಂಡರ್ಸೆ (ಏಕದಿನಕ್ಕೆ ಮಾತ್ರ), ಚಮಿಕ ಕರುಣಾರತ್ನೆ, ದಿಲ್ಶನ್ ಮದುಶಂಕ, ಕಸುನ್ ರಜಿತ, ನುವನಿದು ಫೆರ್ನಾಂಡೊ (ಏಕದಿನಕ್ಕೆ ಮಾತ್ರ). ದುನಿತ್ ವೆಲ್ಲಲಗೆ, ಪ್ರಮೋದ್ ಮದುಶಾನ್, ಲಹಿರು ಕುಮಾರ, ನುವಾನ್ ತುಷಾರ (ಟಿ20ಗೆ ಮಾತ್ರ).