ಟಿ-ಟ್ವೆಂಟಿ: 35 ಎಸೆತಗಳಲ್ಲಿ ಮಾರ್ಟಿನ್ ಗಪ್ಟಿಲ್ ಶತಕ
Team Udayavani, Jul 29, 2018, 10:29 AM IST
ಲಂಡನ್: ಇಂಗ್ಲಿಷ್ ಕೌಂಟಿಯಲ್ಲಿ ವೂರ್ಸೆಸ್ಟರ್ಶೈರ್ ಪರ ಆಡುತ್ತಿರುವ ನ್ಯೂಜಿಲ್ಯಾಂಡಿನ ಸ್ಫೋಟಕ ಆರಂಭಕಾರ ಮಾರ್ಟಿನ್ ಗಪ್ಟಿಲ್ ನಾರ್ಥಂಪ್ಟನ್ಶೈರ್ ವಿರುದ್ಧದ “ಟಿ20 ಬ್ಲಾಸ್ಟ್’ ಸರಣಿಯಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿ ಸುದ್ದಿಯಾಗಿದ್ದಾರೆ. ಇದು ಟಿ20 ಇತಿಹಾಸದ 4ನೇ ಅತೀ ವೇಗದ ಶತಕವಾಗಿದೆ.
ಮಾರ್ಟಿನ್ ಗಪ್ಟಿಲ್ 38 ಎಸೆತಗಳಿಂದ 102 ರನ್ ಚಚ್ಚಿದರು (12 ಬೌಂಡರಿ, 7 ಸಿಕ್ಸರ್). ಇವರ ಸಾಹಸದಿಂದ ವೂರ್ಸೆಸ್ಟರ್ಶೈರ್ 9 ವಿಕೆಟ್ಗಳ ಪ್ರಚಂಡ ಗೆಲುವು ಸಾಧಿಸಿತು. 188 ರನ್ ಗುರಿಯನ್ನು ಬೆನ್ನುಹತ್ತಿದ್ದ ವೂರ್ಸೆಸ್ಟರ್ಶೈರ್ 7 ಓವರ್ಗಳಿರುವಂತೆಯೇ 9 ವಿಕೆಟ್ಗಳ ಜಯಭೇರಿ ಮೊಳಗಿಸಿತು. ಜೋ ಕ್ಲರ್ಕ್ 33 ಎಸೆತಗಳಿಂದ ಅಜೇಯ 61 ರನ್ ಬಾರಿಸಿದರು. 2013ರ ಐಪಿಎಲ್ನಲ್ಲಿ ಆರ್ಸಿಬಿಯ ಕ್ರಿಸ್ ಗೇಲ್ ಪುಣೆ ವಿರುದ್ಧ 30 ಎಸೆತಗಳಲ್ಲಿ ಶತಕ ಸಿಡಿಸಿದ್ದು ಟಿ20 ದಾಖಲೆಯಾಗಿದೆ. ರೋಹಿತ್ ಶರ್ಮ, ಮಿಲ್ಲರ್ ಕೂಡ 35 ಎಸೆತಗಳಲ್ಲಿ ಸೆಂಚುರಿ ಹೊಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ