ಮೆಕ್ಸಿಕೊ ಓಪನ್‌ ಟೆನಿಸ್‌: ಕಿರ್ಗಿಯೋಸ್‌-ಜ್ವರೇವ್‌ ಪ್ರಶಸ್ತಿ ಕಾದಾಟ

Team Udayavani, Mar 3, 2019, 12:30 AM IST

ಅಕಾಪುಲ್ಕೊ: ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ “ಮೆಕ್ಸಿಕೊ ಓಪನ್‌’ ಕೂಟದ ಫೈನಲ್‌ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಅವರು ವಿಶ್ವದ 3ನೇ ರ್‍ಯಾಂಕಿನ ಅಲೆಕ್ಸಾಂಡರ್‌ ಜ್ವರೇವ್‌ ಅವರನ್ನು ಎದುರಿಸಲಿದ್ದಾರೆ.

ಮೊದಲ ಸೆಮಿಫೈನಲ್‌ನಲ್ಲಿ ಕಿರ್ಗಿಯೋಸ್‌ 3ನೇ ಶ್ರೇಯಾಂಕಿತ ಜಾನ್‌ ಇಸ್ನರ್‌ ವಿರುದ್ಧ 7-5, 5-7, 7-6 (9/7) ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಈ ಪಂದ್ಯ 2 ಗಂಟೆ, 21 ನಿಮಿಷಗಳ ತನಕ ನಡೆಯಿತು. ಹಿಂದಿನೆರಡು ಪಂದ್ಯಗಳಲ್ಲಿ ಕಿರ್ಗಿಯೋಸ್‌ ಸ್ಟಾರ್‌ ಆಟಗಾರ ರಫೆಲ್‌ ನಡಾಲ್‌, ಸ್ಟಾನ್‌ ವಾವ್ರಿಂಕ ಅವರನ್ನು ಸೋಲಿಸಿ ಮೆರೆದಿದ್ದರು.

ಕಿರ್ಗಿಯೋಸ್‌ 2018ರ ಜನವರಿಯಲ್ಲಿ ಬ್ರಿಸ್ಬೇನ್‌ನಲ್ಲಿ ವೃತ್ತಿಜೀವನದ 4ನೇ ಪ್ರಶಸ್ತಿ ಜಯಿಸಿದ ಬಳಿಕ ಎಟಿಪಿ ಕೂಟದ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು.

ಇನ್ನೊಂದು ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಬ್ರಿಟನಿನ ಕ್ಯಾಮರೂನ್‌ ನೂರೀ ಅವರನ್ನು 7-6 (7-0), 6-3 ಸೆಟ್‌ಗಳಿಂದ ಸೋಲಿಸಿದರು.

ವಾಂಗ್‌-ಕೆನ್ನಿನ್‌ ಎದುರಾಳಿ
ವನಿತಾ ಸಿಂಗಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಚೀನದ ವಾಂಗ್‌ ಯೂಫಾನ್‌ ಕ್ರೊವೇಶಿಯಾದ ಡೋನಾ ವೆಕಿಕ್‌ ಅವರನ್ನು 2-6, 6-3, 6-1 ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಡಬ್ಲ್ಯುಟಿಪಿ ಟೂರ್‌ ಫೈನಲ್‌ ಪ್ರವೇಶಿಸಿದರು.  ಫೈನಲ್‌ನಲ್ಲಿ ಅವರು ಅಮೆರಿಕದ ಸೋಫಿಯಾ ಕೆನ್ನಿನ್‌ ವಿರುದ್ಧ ಆಡಲಿದ್ದಾರೆ. ಇನ್ನೊಂದು ಸೆಮಿಸ್‌ನಲ್ಲಿ ಕೆನ್ನಿನ್‌ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ವಿರುದ್ಧ 6-4, 3-6, 7-5ರಿಂದ ಜಯ ಸಾಧಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ