ಮಿಕ್ಸೆಡ್ ಟಿ20 ಪ್ರದರ್ಶನ ಪಂದ್ಯ
Team Udayavani, Apr 5, 2019, 6:08 AM IST
ಹೊಸದಿಲ್ಲಿ: ರಾಯಲ್ ಜಾಲೆಂಜ್ ನ್ಪೋರ್ಟ್ಸ್ ಡ್ರಿಂಕ್ಸ್ ಸಂಸ್ಥೆಯ ಕಾರ್ಯಗಾರದ ಅಂಗವಾಗಿ ಮಿಕ್ಸೆಡ್ ಜಂಡರ್ ಟಿ20 ಪ್ರದರ್ಶನ ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ ಬೆಂಗಳೂರು ತಂಡದ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ವನಿತಾ ಕ್ರಿಕೆಟಿಗರು ಪಾಲ್ಗೊಳ್ಳಿದ್ದಾರೆ. ವಿರಾಟ್ ಕೊಹ್ಲಿ, ಹರ್ಮನ್ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ಈ ಪಂದ್ಯದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈ ಪಂದ್ಯದ ದಿನಾಂಕ ಮತ್ತು ಸ್ಥಳ ಇನ್ನಷ್ಟೇ ಅಂತಿಮಗೊಳ್ಳಲಿದೆ.
“ಪುರುಷರೇ ಇರಲಿ, ವನಿತೆಯರೇ ಇರಲಿ, ಕ್ರಿಕೆಟ್ ಒಂದು ಕ್ರೀಡೆ. ಕ್ರಿಕೆಟ್ ಅಭಿಮಾನಿಗಳು ಕ್ರೀಡೆಯನ್ನು ಲಿಂಗಾಧಾರಿತವಾಗಿ ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ಕ್ರೀಡೆಯ ಸಮಾನತೆ ಎನ್ನುವುದು ಬದುಕಿನ ಸಮಾನತೆಯ ಪ್ರತಿಬಿಂಬ. ಭವಿಷ್ಯ ಉತ್ತಮವಾಗಿರಬೇಕಾದರೆ ಸವಾಲನ್ನು ಸ್ವೀಕರಿಸಿ ಎಲ್ಲ ಗ್ರಹಿಕೆಗಳನ್ನು ತೊರೆಯಬೇಕು’ ಎಂದು ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
“ಕಳೆದ ಕೆಲವು ವರ್ಷಗಳಿಂದ ವನಿತಾ ಕ್ರಿಕೆಟ್ನಲ್ಲಿ ಉನ್ನತ ಮಟ್ಟದ ಅಭಿವೃದ್ಧಿಯಾಗುತ್ತದೆ. ಆದರೆ ಆಟದ ಮೈದಾನದಲ್ಲಿ ಸಮಾನತೆಯಿಲ್ಲ. ಅವಕಾಶ, ವೇತನ, ಪ್ರಸಾರ ಮತ್ತು ಅಭಿಮಾನಿಗಳ ಪ್ರೋತ್ಸಾಹದ ವಿಷಯದಲ್ಲಿ ಭಾರೀ ವ್ಯತ್ಯಾಸವಿದೆ’ ಎಂದು ಭಾರತ ವನಿತಾ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.