ವನಿತಾ ಹಾಕಿ: ಮಲೇಶ್ಯ ವಿರುದ್ಧ ಭಾರತಕ್ಕೆ ಜಯ
Team Udayavani, Apr 5, 2019, 6:15 AM IST
ಸಾಂದರ್ಭಿಕ ಚಿತ್ರ
ಕೌಲಾಲಂಪುರ: ಸ್ಟ್ರೈಕರ್ ವಂದನಾ ಕಟಾರಿಯಾ ಅವರ ಅವಳಿ ಗೋಲುಗಳ ನೆರವಿನಿಂದ ಮಲೇಶ್ಯ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಹಾಕಿ ಮುಖಾಮುಖೀಯಲ್ಲಿ ಭಾರತ ವನಿತಾ ತಂಡ ಗೆಲುವು ದಾಖಲಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಭಾರತ 3-0 ಅಂತರದಿಂದ ಮಲೇಶ್ಯಕ್ಕೆ ಸೋಲುಣಿಸಿತು. ಭಾರತದ ಪರ ವಂದನಾ 17ನೇ ಮತ್ತು 60ನೇ ನಿಮಿಷದಲ್ಲಿ, ಲಾಲ್ರೆಮಿಯಾಮಿ 38ನೇ ನಿಮಿಷದಲ್ಲಿ ಗೋಲು ಹೊಡೆದು ಗೆಲುವು ತಂದುಕೊಟ್ಟರು. ಮಲೇಶ್ಯದ ಆಕ್ರಮಣಕಾರಿ ಆಟಕ್ಕೆ ಪ್ರತ್ಯುತ್ತರ ನೀಡಿದ ಭಾರತ 4 ಪೆನಾಲ್ಟಿ ಕಾರ್ನರ್ಗಳನ್ನು ತಪ್ಪಿಸಿ ಮೇಲುಗೈ ಸಾಧಿಸಿತು. ಸರಣಿಯ 2ನೇ ಪಂದ್ಯ ಶನಿವಾರ ನಡೆಯಲಿದೆ.