ಮೊಹಾಲಿ, ದಿಲ್ಲಿ ಏಕದಿನ ಪಂದ್ಯಗಳ ಸ್ಥಳಾಂತರವಿಲ್ಲ: ಬಿಸಿಸಿಐ ಸ್ಪಷ್ಟನೆ
Team Udayavani, Mar 2, 2019, 12:30 AM IST
ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವೆ ಬಿಗುವಿನ ವಾತಾವರಣ ನೆಲೆಸಿದರೂ ಆಸ್ಟ್ರೇಲಿಯದೆದುರಿನ ಏಕದಿನ ಸರಣಿಯ ಮೊಹಾಲಿ ಮತ್ತು ಹೊಸದಿಲ್ಲಿ ಪಂದ್ಯಗಳನ್ನು ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂಬುದಾಗಿ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ. ಇವು ಸರಣಿಯ ಕೊನೆಯ ಪಂದ್ಯಗಳಾಗಿದ್ದು, ಮಾ. 10 ಮತ್ತು 13ರಂದು ನಡೆಯಲಿವೆ.
ಇವೆರಡೂ ಉತ್ತರ ಭಾರತದಲ್ಲಿ ನಡೆಯುವ ಪಂದ್ಯಗಳಾಗಿವೆ. ಮೊಹಾಲಿ ಪಾಕಿಸ್ಥಾನ ಗಡಿಗೆ ಸಮೀಪದಲ್ಲೇ ಇದೆ. ಇನ್ನೊಂದು ಪಂದ್ಯ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವುದರಿಂದ ಭಾರೀ ಭದ್ರತೆ ನೀಡಬೇಕಾಗುತ್ತದೆ. ಇವುಗಳನ್ನು ಸ್ಥಳಾಂತರಿ ಸುವುದಾದರೆ ಒಂದು ಪಂದ್ಯದ ಆತಿಥ್ಯವನ್ನು ತಾನು ವಹಿಸಿಕೊಳ್ಳುವುದಾಗಿ ಸೌರಾಷ್ಟ್ರ ಕ್ರಿಕೆಟ್ ಮಂಡಳಿ ಹೇಳಿತ್ತು. “ಮೂಲ ವೇಳಾಪಟ್ಟಿಯಂತೆಯೇ ಪಂದ್ಯಗಳು ಸಾಗಲಿದ್ದು, ಇದನ್ನು ಬದ ಲಾಯಿಸುವ ಯಾವುದೇ ಯೋಜನೆ ಇಲ್ಲ ಎಂಬುದಾಗಿ ಈಗಾಗಲೇ ಆಯಾಯ ಕ್ರಿಕೆಟ್ ಮಂಡಳಿಗಳಿಗೆ ತಿಳಿಸಲಾಗಿದೆ’ ಎಂದು ಖನ್ನಾ ಹೇಳಿದರು.