ಇನ್ನಷ್ಟು ದಾಖಲೆಯ ಗುರಿ: ಪರ್ದೀಪ್ ನರ್ವಾಲ್
Team Udayavani, Sep 13, 2019, 5:03 AM IST
ಕೋಲ್ಕತಾ: ಡುಮ್ಕಿ ಸ್ಪೆಷಲಿಸ್ಟ್ ಪರ್ದೀಪ್ ನರ್ವಾಲ್ ಪ್ರೊ ಕಬಡ್ಡಿ ರೈಡಿಂಗ್ನಲ್ಲಿ ಒಂದು ಸಾವಿರ ಅಂಕ ಸಂಪಾದಿಸಿದ ಮೊದಲ ಸಾಧಕನಾಗಿ ಮೂಡಿ ಬಂದಿದ್ದಾರೆ. ಆದರೆ ತನ್ನ ಸಾಧನೆ ಇಲ್ಲಿಗೇ ನಿಲ್ಲದ್ದು, ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವುದು ತನ್ನ ಗುರಿ ಎಂಬುದಾಗಿ ಪಾಟ್ನಾ ಪೈರೇಟ್ಸ್ ತಂಡದ ಸ್ಟಾರ್ ಆಟಗಾರನೂ ಆಗಿರುವ ನರ್ವಾಲ್ ಹೇಳಿದರು.
ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಹರ್ಯಾಣ ವಿರುದ್ಧ 8 ಅಂಕ ಗಳಿಸಿದಾಗ ಪರ್ದೀಪ್ ನರ್ವಾಲ್ ಅತೀ ಹೆಚ್ಚು ರೈಡಿಂಗ್ ಅಂಕ ಗಳಿಸಿದ 2ನೇ ಆಟಗಾರನೆನಿಸಿದ್ದರು (369). ಅನಂತರ ತಮ್ಮ ಡುಮ್ಕಿ ರೈಡಿಂಗ್ ಸ್ಕಿಲ್ ಮೂಲಕ ಮೆರೆಯುತ್ತಲೇ ಬಂದ ಪರ್ದೀಪ್ ಇದೀಗ ಅತ್ಯಧಿಕ ರೈಡಿಂಗ್ ಅಂಕಗಳನ್ನು ಗಳಿಸಿದ ಸಾಧಕರಾಗಿದ್ದಾರೆ.
ಈ ಕುರಿತು ಮಾತನಾಡಿದ ಪರ್ದೀಪ್, “ಈ ಸಾಧನೆಯಿಂದ ನಾನು ಖುಷಿಪಡುತ್ತಿಲ್ಲ. ನಾನು ಇನ್ನೂ ಬಹಳಷ್ಟು ಸಾಧನೆ ಮಾಡಲಿಕ್ಕಿದೆ. ಆಗ ಸಂಭ್ರಮಿಸುತ್ತೇನೆ’ ಎಂದಿದ್ದಾರೆ.
ಅಮೋಘ ಪಯಣ…
“ಮೊದಲ ದಿನದಿಂದಲೇ ಪ್ರೊ ಕಬಡ್ಡಿ ಎನ್ನುವುದು ನನ್ನ ಪಾಲಿಗೆ ಅಮೋಘ ಪಯಣವಾಗಿದೆ. ಇದು ಇಲ್ಲಿಗೇ ನಿಲ್ಲದು. ಆದರೆ ತಂಡದ ಪ್ಲೇ-ಆಫ್ ಹಾದಿ ಸುಲಭವಲ್ಲ. ಇನ್ನೂ 8 ಪಂದ್ಯಗಳು ನಮ್ಮ ಮುಂದಿವೆ. ಹಿಂದಿನ ತಪ್ಪುಗಳನ್ನು ಪುನರಾವರ್ತಿಸದೆ ಈ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಿದೆ. ಎಲ್ಲರೂ ಸಾಮರ್ಥ್ಯ ಮೀರಿ ಪ್ರದರ್ಶನ ನೀಡಬೇಕಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ