ರಾಷ್ಟ್ರೀಯ ಶೂಟಿಂಗ್:ಮನು ಭಾಕರ್ಗೆ ಸೋಲುಣಿಸಿದ 13ರ ಹುಡುಗಿ!
Team Udayavani, Dec 1, 2018, 6:45 AM IST
ಕೊಚ್ಚಿ: ಕೇರಳದಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ 13 ವರ್ಷದ ತೆಲಂಗಾಣ ಹುಡುಗಿ ಇಶಾ ಸಿಂಗ್ ಕಾಮನ್ವೆಲ್ತ್ ಗೇಮ್ಸ್, ವಿಶ್ವಕಪ್ ಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ತಾರಾ ಶೂಟರ್ ಮನು ಭಾಕರ್ರನ್ನು ಸೋಲಿಸಿ 3 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದ 10 ಮೀ. ಏರ್ ಪಿಸ್ತೂಲ್, ಕಿರಿಯರ ವಿಭಾಗ ಹಾಗೂ ಯೂತ್ ವಿಭಾಗದ 10 ಮೀ. ಏರ್ ಪಿಸ್ತೂಲ್ನಲ್ಲಿ ಇಶಾ ಸಿಂಗ್ ಭಾರತದ ಶ್ರೇಷ್ಠ ಶೂಟರ್ ಮನು ಭಾಕರ್ಗೆ ಮಣಿಸಿದರು. ಮೂರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮನು ಭಾಕರ್ 2 ಬೆಳ್ಳಿ ಹಾಗೂ 1 ಕಂಚಿನ ಪದಕಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು.
ಮಹಿಳಾ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಇಶಾ 241.0, ಜೂನಿಯರ್ ವಿಭಾಗದಲ್ಲಿ 239.3 ಹಾಗೂ ಯೂತ್ ವಿಭಾಗದಲ್ಲಿ 240.9 ಅಂಕವನ್ನು ಪಡೆದುಕೊಂಡರು. ಮನು ಭಾಕರ್ ಕ್ರಮವಾಗಿ 238.9, 238.2 ಹಾಗೂ 216.3 ಅಂಕ ಪಡೆಯಲಷ್ಟೇ ಶಕ್ತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ