ಇಂಗ್ಲೆಂಡ್‌ ನೆರವಿಗೆ ಜಾನಿ ಬೇರ್‌ಸ್ಟೋ


Team Udayavani, Mar 31, 2018, 7:00 AM IST

9.jpg

ಕ್ರೈಸ್ಟ್‌ಚರ್ಚ್‌: ಆಕ್ಲಂಡ್‌ನ‌ಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನಾಟಕೀಯ ಕುಸಿತ ಕಂಡಿದ್ದ ಇಂಗ್ಲೆಂಡ್‌ ತಂಡವು ಶುಕ್ರವಾರದಿಂದ ಆರಂಭವಾದ ದ್ವಿತೀಯ ಟೆಸ್ಟ್‌ ಆರಂಭದಲ್ಲಿ ಕುಸಿತ ಕಂಡಿತ್ತು. ಆದರೆ ಜಾನಿ ಬೇರ್‌ಸ್ಟೋ ಮತ್ತು ಮಾರ್ಕ್‌ ವುಡ್‌ ಅವರ ಜವಾಬ್ದಾರಿಯ ಆಟದಿಂದಾಗಿ ಇಂಗ್ಲೆಂಡ್‌ ಚೇತರಿಸಿಕೊಂಡಿದ್ದು ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 290 ರನ್‌ ಪೇರಿಸಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ ಸ್ಟೋನ್‌ಮ್ಯಾನ್‌ ಅವರ ಉತ್ತಮ ಆಟದಿಂದಾಗಿ ಚೇತರಿಸಿಕೊಂಡಿತು. ತಂಡದ ಮೊತ್ತ 94 ತಲುಪಿದಾಗ ಐವರು ಪ್ರಮುಖ ಆಟಗಾರರು ಕಳೆದುಕೊಂಡ ಇಂಗ್ಲೆಂಡ್‌ ಮತ್ತೆ ಅಲ್ಪ ಮೊತ್ತಕ್ಕೆ ಕುಸಿಯಬಹುದೆಂದು ಭಾವಿಸಲಾಗಿತ್ತು. ಆದರೆ ಬೇರ್‌ಸ್ಟೋ ಇತರ ಮೂವರು ಆಟಗಾರರ ಉತ್ತಮ ಬೆಂಬಲದಿಂದ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.

ತಂಡದ ಮೊತ್ತ 94 ರನ್‌ ತಲುಪಿದಾಗ ಆರಂಭಿಕ ಸ್ಟೋನ್‌ಮ್ಯಾನ್‌ ಔಟಾದರು. ಅವರು 111 ಎಸೆತ ಎದುರಿಸಿ 35 ರನ್‌ ಗಳಿಸಿದ್ದರು. ಆಬಳಿಕ ಬೇರ್‌ಸ್ಟೋ ಜವಾಬ್ದಾರಿಯ ಆಟವಾಡಿ ಪಂದ್ಯದ ಗತಿಯನ್ನು ಬದಲಿಸಿದರು. ಮೊದಲಿಗೆ ಬೆನ್‌ ಸ್ಟೋಕ್ಸ್‌ ಜತೆ 6ನೇ ವಿಕೆಟಿಗೆ 57 ರನ್‌ ಪೇರಿಸಿದ ಬೇರ್‌ಸ್ಟೋ  8ನೇ ವಿಕೆಟಿಗೆ ವುಡ್‌ ಜತೆ 95 ರನ್ನುಗಳ ಉತ್ತಮ ಜತೆಯಾಟ ನಡೆಸಿದರು. ವುಡ್‌ 52 ರನ್‌ ಗಳಿಸಿದರು.

ವಿಕೆಟ್‌ನ ಒಂದು ಕಡೆ ಕ್ರೀಸ್‌ನಲ್ಲಿ  ಗಟ್ಟಿಯಾಗಿ ನಿಂತ ಬೇರ್‌ಸ್ಟೋ ಮುರಿಯದ 9 ವಿಕೆಟಿಗೆ 31 ರನ್‌  ಪೇರಿಸಿದ್ದಾರಲ್ಲದೇ ವೈಯಕ್ತಿಕವಾಗಿ 5ನೇ ಶತಕ ದಾಖಲಿಸುವ ಸನಿಹ ಬಂದಿದ್ದಾರೆ. 154 ಎಸೆತ ಎದುರಿಸಿರುವ ಅವರು 97 ರನ್‌ ಗಳಿಸಿ ಆಡುತ್ತಿದ್ದಾರೆ. ಬಿಗು ದಾಳಿ ಸಂಘಟಿಸಿದ ಟಿಮ್‌ ಸೌಥಿ 60 ರನ್ನಿಗೆ 5 ವಿಕೆಟ್‌ ಉರುಳಿಸಿದರೆ ಬೌಲ್ಟ್ 79 ರನ್ನಿಗೆ 3 ವಿಕೆಟ್‌  ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರು 
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌ 8 ವಿಕೆಟಿಗೆ 290 (ಸ್ಟೋನ್‌ಮ್ಯಾನ್‌ 35, ಜೋ ರೂಟ್‌ 37, ಬೆನ್‌ ಸ್ಟೋಕ್ಸ್‌ 25, ಬೇರ್‌ಸ್ಟೋ 97 ಬ್ಯಾಟಿಂಗ್‌, ವುಡ್‌ 52, ಬೌಲ್ಟ್ 79ಕ್ಕೆ 3, ಸೌಥಿ 60ಕ್ಕೆ 5).

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.