ನಿಕೋಲಸ್ ಪೂರಣ್ಗೆ ವೆಸ್ಟ್ ಇಂಡೀಸ್ ನಾಯಕತ್ವ
Team Udayavani, May 3, 2022, 11:01 PM IST
ಕಿಂಗ್ಸ್ಟನ್ (ಜಮೈಕಾ): ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರಣ್ ಅವರನ್ನು ವೆಸ್ಟ್ ಇಂಡೀಸ್ ಏಕದಿನ ಹಾಗೂ ಟಿ20 ತಂಡಗಳ ನೂತನ ನಾಯಕನನ್ನಾಗಿ ನೇಮಿಸಲಾಗಿದೆ.
ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ಕೈರನ್ ಪೊಲಾರ್ಡ್ ಸ್ಥಾನಕ್ಕೆ ಪೂರಣ್ ಆಯ್ಕೆಯಾದರು. ಪೊಲಾರ್ಡ್ ನಾಯಕತ್ವದ ವೇಳೆ ಪೂರಣ್ ಉಪನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇದೇ ವೇಳೆ ಶೈ ಹೋಪ್ ಅವರನ್ನು ಏಕದಿನ ತಂಡದ ಉಪನಾಯಕನನ್ನಾಗಿ ಆರಿಸಲಾಗಿದೆ.
“ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಮಹಾನ್ ಗೌರವ. ಇದೊಂದು ಪ್ರತಿಷ್ಠಿತ ಹುದ್ದೆ. ವಿಂಡೀಸ್ ಕಂಡ ದೈತ್ಯ ಹಾಗೂ ಯಶಸ್ವಿ ನಾಯಕರ ಹಾದಿಯಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಯೋಜನೆ’ ಎಂಬುದಾಗಿ ನಿಕೋಲಸ್ ಪೂರಣ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಅವರು ಐಪಿಎಲ್ನಲ್ಲಿ ಸನ್ರೈಸರ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇದೇ ತಿಂಗಳು ನೆದರ್ಲೆಂಡ್ಸ್ ಪ್ರವಾಸಗೈಯುವ ಮೂಲಕ ಪೂರಣ್ ಅವರ ವೆಸ್ಟ್ ಇಂಡೀಸ್ ನಾಯಕತ್ವದ ನಂಟು ಬೆಳೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ