ಮಾಂಟೆ ಕಾರ್ಲೊ ಮಾಸ್ಟರ್: ಸೆಮಿಫೈನಲ್‌ಗೆ ಜೊಕೋ

Team Udayavani, Apr 20, 2019, 9:25 AM IST

ಮಾಂಟೆ ಕಾರ್ಲೊ: ವಿಶ್ವದ ನಂ. ವನ್‌ ಟೆನಿಸಗ ನೊವಾಕ್‌ ಜೊಕೋವಿಕ್‌ “ಮಾಂಟೆ ಕಾರ್ಲೊ ಮಾಸ್ಟರ್’ ಟೆನಿಸ್‌ ಕೂಟದ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಜೊಕೋವಿಕ್‌ ರಶ್ಯದ ಡೇನಿಯಲ್‌ ಮೆಡ್ವಡೇವ್‌ ಅವರನ್ನು 6-3, 4-6, 6-2 ಸೆಟ್‌ಗಳಿಂದ ಸೋಲಿಸಿದರು.

ಎರಡು ಬಾರಿ ಮಾಜಿ ಚಾಂಪಿಯನ್‌ ಆಗಿರುವ ಜೊಕೋವಿಕ್‌ 10ನೇ ಶ್ರೇಯಾಂಕಿತ ಮೆಡ್ವಡೇವ್‌ ವಿರುದ್ಧ 5 ಬಾರಿ ಸರ್ವ್‌ ಕಳೆದುಕೊಂಡರು. ಮೊದಲ ಸೆಟ್‌ ಸುಲಭವಾಗಿ ಗೆದ್ದ ಜೊಕೋವಿಕ್‌ ದ್ವಿತೀಯ ಗೇಮ್‌ನಲ್ಲಿ ರಶ್ಯ ಆಟಗಾರನಿಂದ ತೀವ್ರ ಪೈಪೋಟಿ ಎದುರಾಯಿತು. ಅತ್ಯತ್ತಮ ಆಟವಾಡಿ ಮೆಡ್ವಡೇವ್‌ ದ್ವಿತೀಯ ಸೆಟ್‌ ತಮ್ಮದಾಗಿಸಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಎಚ್ಚರಿಕೆ ಆಟವಾಡಿ ಪ್ರಾಬಲ್ಯ ಮೆರೆದ ಜೊಕೋವಿಕ್‌ 6-2 ಅಂತರದಿಂದ ಗೆದ್ದು ಮುನ್ನಡೆದರು.ಸೆಮಿಫೈನಲ್‌ನಲ್ಲಿ ಅವರು ಸರ್ಬಿಯಾದ ಆಟಗಾರ ದುಸಾನ್‌ ಲಜೊವಿಕ್‌ ಅವರನ್ನು ಎದುರಲಿಸಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ