ಸತತ 25 ಪಂದ್ಯಗಳಲ್ಲಿ ಜೊಕೋ ಅಜೇಯ ಓಟ


Team Udayavani, Sep 3, 2020, 6:41 PM IST

ಸತತ 25 ಪಂದ್ಯಗಳಲ್ಲಿ ಜೊಕೋ ಅಜೇಯ ಓಟ

ನ್ಯೂಯಾರ್ಕ್: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಈ ವರ್ಷದ ತಮ್ಮ ಸತತ ಗೆಲುವಿನ ಓಟವನ್ನು 25 ಪಂದ್ಯಗಳಿಗೆ ವಿಸ್ತರಿಸಿದ್ದಾರೆ. ಯುಎಸ್‌ ಓಪನ್‌ ಪಂದ್ಯಾವಳಿಯ ತೃತೀಯ ಸುತ್ತು ಪ್ರವೇಶಿಸುವ ಮೂಲಕ ಸರ್ಬಿಯನ್‌ ಟೆನಿಸಿಗ ಈ ಹೆಗ್ಗಳಿಕೆಗೆ ಪಾತ್ರರಾದರು.

ಬುಧವಾರ ರಾತ್ರಿಯ ದ್ವಿತೀಯ ಸುತ್ತಿನ ಮುಖಾಮುಖಿಯಲ್ಲಿ ಜೊಕೋವಿಕ್‌ ಬ್ರಿಟನ್ನಿನ ಕೈಲ್‌ ಎಡ್ಮಂಡ್ಸ್‌ ಅವರನ್ನು 6-7 (5-7), 6-3, 6-4, 6-2 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಅವರಿನ್ನು ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟ್ರಫ್ ಸವಾಲನ್ನು ಎದುರಿಸುವರು. ಸ್ಟ್ರಫ್ ಅಮೆರಿಕದ ಮೈಕಲ್‌ ಮೋ ವಿರುದ್ಧ 6-2, 6-2, 7-5 ಅಂಕಗಳಿಂದ ಗೆದ್ದು ಬಂದರು.

ವರ್ಷವೊಂದರಲ್ಲಿ ಸತತ 25 ಪಂದ್ಯಗಳನ್ನು ಗೆದ್ದದ್ದು ಜೊಕೋವಿಕ್‌ ಅವರ 2ನೇ ಅತ್ಯುತ್ತಮ ಸಾಧನೆಯಾಗಿದೆ. 2011ರಲ್ಲಿ ಅವರು ಸತತ 41 ಪಂದ್ಯಗಳಲ್ಲಿ ಗೆದ್ದು ಬಂದಿದ್ದರು. ಕೆನಡಾದ ಡೆನ್ನಿಸ್‌ ಶಪೊವಲೋವ್‌, ಗ್ರೀಸ್‌ನ ಸ್ಟೆಫ‌ನಸ್‌ ಸಿಸಿಪಸ್‌ 3ನೇ ಸುತ್ತು ಪ್ರವೇಶಿಸಿದ ಉಳಿದಿಬ್ಬರು ಪ್ರಮುಖ ಆಟಗಾರರು. ಶಪೊವಲೋವ್‌ ದಕ್ಷಿಣ ಕೊರಿಯಾದ ನೋನ್‌ ಸೂನ್‌ ವೂ ಅವರನ್ನು 6-7 (5-7), 6-4, 6-4, 6-2ರಿಂದ ಪರಾಭವಗೊಳಿಸಿದರೆ, ಸಿಸಿಪಸ್‌ ಅಮೆರಿಕದ ಮ್ಯಾಕ್ಸಿಮ್‌ ಕ್ರೇಸಿ ವಿರುದ್ಧ 7-6 (7-2), 6-3, 6-4 ಅಂತರದ ಮೇಲುಗೈ ಸಾಧಿಸಿದರು.

ಸಿಸಿಪಸ್‌ ಅವರ ಮುಂದಿನ ಸುತ್ತಿನ ಎದುರಾಳಿ ಕ್ರೊವೇಶಿಯಾದ ಬೋರ್ನ ಕೊರಿಕ್‌. ಅವರು ಆರ್ಜೆಂಟೀನಾದ ಜುವಾನ್‌ ಇಗ್ನೇಸಿಯೊ ಲೊಂಡೆರೊ ವಿರುದ್ಧ 5 ಸೆಟ್‌ಗಳ ಸೆಣಸಾಟದಲ್ಲಿ ಗೆದ್ದು ಬಂದರು. ಶಪೊವಲೋವ್‌ ಅಮೆರಿಕದ ಟೇಲರ್‌ ಫ್ರಿಟ್ಜ್ ವಿರುದ್ಧ ಆಡಲಿದ್ದಾರೆ. ಅವರು ಫ್ರಾನ್ಸ್‌ನ ಗಿಲ್ಲೆಸ್‌ ಸಿಮೋನ್‌ಗೆ ಸೋಲುಣಿಸಿದರು.

ದಿವಿಜ್‌ ಜೋಡಿಗೆ ಸೋಲು
ಭಾರತದ ದಿವಿಜ್‌ ಶರಣ್‌-ಸರ್ಬಿಯಾದ ನಿಕೋಲ ಕ್ಯಾಸಿಕ್‌ ಜೋಡಿ ಪುರುಷರ ಡಬಲ್ಸ್‌ ಸ್ಪರ್ಧೆಯ ಪ್ರಥಮ ಸುತ್ತಿನಲ್ಲೇ ಸೋಲನುಭವಿಸಿದೆ. ಕ್ರೊವೇಶಿಯಾದ ಮೆಕ್ಟಿಕ್‌-ಕೂಲೋಫ್ ಜೋಡಿ ಇವರೆದುರಿನ ಪಂದ್ಯವನ್ನು 6-4, 3-6, 6-3 ಅಂತರದಿಂದ ಜಯಿಸಿತು.

ಟಾಪ್ ನ್ಯೂಸ್

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

narendra-modi

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

1221

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಮತ್ತೆ ಹಾಜರ್‌ : ಟಿಕೆಟನ್ನು ಮಾಹಿಯೇ ಕೊಡಿಸುವ ನಂಬಿಕೆಯಲ್ಲಿ ಚಾಚಾ

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

MUST WATCH

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

ಹೊಸ ಸೇರ್ಪಡೆ

10kaalubaayi

ಕಾಲು-ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

The city police commissioner Kamalpant received the public’s plea

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.