ಇಯಾನ್‌ ಮಾರ್ಗನ್‌ಗೆ ಒಂದು ಪಂದ್ಯ ನಿಷೇಧ

Team Udayavani, May 16, 2019, 6:00 AM IST

ಲಂಡನ್‌: ಪಾಕಿಸ್ಥಾನ ವಿರುದ್ಧದ ಬ್ರಿಸ್ಟಲ್ ಏಕದಿನ ಪಂದ್ಯದ ವೇಳೆ ಓವರ್‌ ಗತಿ ಕಾಯ್ದುಕೊಳ್ಳುವಲ್ಲಿ ವಿಫ‌ಲಗೊಂಡ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಅವರಿಗೆ ಐಸಿಸಿ ಒಂದು ಪಂದ್ಯದ ನಿಷೇಧ ಹೇರಿದೆ. ಇದರಿಂದ ಅವರು 4ನೇ ಏಕದಿನದಿಂದ ಹೊರಗುಳಿಯಲಿದ್ದಾರೆ. ಜತೆಗೆ ಪಂದ್ಯ ಸಂಭಾವನೆಯ ಶೇ. 40ರಷ್ಟು ದಂಡವನ್ನೂ ವಿಧಿಸಲಾಗಿದೆ. ಇಂಗ್ಲೆಂಡ್‌ ತಂಡದ ಉಳಿದ ಆಟಗಾರರಿಗೆ ಶೇ. 20ರಷ್ಟು ದಂಡ ಹೇರಲಾಗಿದೆ.

ಮಾರ್ಗನ್‌ ಈ ಸಂಕಟಕ್ಕೆ ಸಿಲುಕುತ್ತಿರುವುದು ಇದು 2ನೇ ಸಲ. ಕಳೆದ ಫೆಬ್ರವರಿಯಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಬಾರ್ಬಡಾಸ್‌ ಪಂದ್ಯದ ವೇಳೆಯೂ ಇಂಗ್ಲೆಂಡ್‌ ಓವರ್‌ ಗತಿ ಕಾಯ್ದುಕೊಳ್ಳುವಲ್ಲಿ ವಿಫ‌ಲವಾಗಿತ್ತು.

ಬ್ರಿಸ್ಟಲ್ ಪಂದ್ಯದಲ್ಲಿ ಔಟಾಗಿ ಹೋಗುವಾಗ ಸಿಟ್ಟಿನಿಂದ ಸ್ಟಂಪ್‌ ಕೆಡವಿದ ಜಾನಿ ಬೇರ್‌ಸ್ಟೋಗೆ ಎಚ್ಚರಿಕೆ ನೀಡಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ