Para Badminton ವಿಶ್ವ ಚಾಂಪಿಯನ್ಶಿಪ್: ಯತಿರಾಜ್, ಕೃಷ್ಣ, ಪ್ರಮೋದ್ಗೆ ಚಿನ್ನ
Team Udayavani, Feb 25, 2024, 11:41 PM IST
ಪಟ್ಟಾಯ (ಥಾಯ್ಲೆಂಡ್): ಭಾರತದ ಸುಹಾಸ್ ಯತಿರಾಜ್, ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ್ ಅವರು ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ನ ತಮ್ಮ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ವಿಶ್ವದ ಮೂರನೇ ರ್ಯಾಂಕಿನ ಯತಿರಾಜ್ ಎಸ್ಎಲ್4 ವಿಭಾಗದಲ್ಲಿ ಇಂಡೋನೇಶ್ಯದ ಫ್ರೆಡಿ ಸೆತಿಯಾವಾನ್ ಅವರನ್ನು 21-18, 21-18 ಗೇಮ್ಗಳಿಂದ ಉರುಳಿಸಿ ಚೊಚ್ಚಲ ವಿಶ್ವ ಪ್ರಶಸ್ತಿ ಗೆದ್ದರು. ಕರ್ನಾಟಕ ಮೂಲದ 40ರ ಹರೆಯದ ಯತಿರಾಜ್ 2007ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಟೋಕಿಯೊ ಪ್ಯಾರಾಲಿಪಿಂಕ್ ಚಿನ್ನ ವಿಜೇತ ಪ್ರಮೋದ್ ಭಗತ್ ಎಸ್ಎಲ್3 ವಿಭಾಗದಲ್ಜಿಲ ಇಂಗ್ಲೆಂಡಿನ ಡೇನಿಯಲ್ ಬೆಥೆಲ್ ಅವರನ್ನು 14-21, 21-15, 21-14 ಗೇಮ್ಗಳಿಂದ ಕೆಡಹಿದರು. ಅವರು ಚೀನದಲ್ಲಿ ನಡೆದಿದ್ದ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಮತ್ತು ಎರಡು ಕಂಚು ಜಯಿಸಿದ್ದರು. ಎಸ್ಎಚ್6 ವಿಭಾಗದಲ್ಲಿ ಕೃಷ್ಣ ನಗರ್ ಚೀನದ ಲಿನ್ ನೈಲಿ ಅವರನ್ನು 22-20, 22-20 ಗೇಮ್ಗಳಿಂದ ಸೋಲಿಸಿ ಚಿನ್ನ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ