ಮೊದಲ ಪಂದ್ಯಕ್ಕೆ ಮೋದಿ ಅತಿಥಿ
Team Udayavani, Oct 6, 2017, 7:00 AM IST
ಹೊಸದಿಲ್ಲಿ: ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೂ ಮುನ್ನ ನಡೆಯುವ ಸರಳ ಸಮಾರಂಭವೊಂದರಲ್ಲಿ ಪ್ರಧಾನಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಭಾರತ-ಯುಎಸ್ಎ ನಡುವಿನ ಪಂದ್ಯವನ್ನೂ ವೀಕ್ಷಿಸಲಿದ್ದಾರೆ. ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ನ ಅಧ್ಯಕ್ಷ ಪ್ರಫುಲ್ ಪಟೇಲ್ ಈ ವಿಷಯ ತಿಳಿಸಿದರು.
ಸಾಮಾನ್ಯವಾಗಿ ಫಿಫಾದ ಯಾವುದೇ ಪಂದ್ಯಾವಳಿಯ ವೇಳೆ ಉದ್ಘಾಟನಾ ಸಮಾರಂಭ ಇರುವುದಿಲ್ಲ. ಭಾರತ ಇಂಥದೊಂದು ಸಮಾರಂಭ ಆಯೋಜಿಸುವ ಬಗ್ಗೆ ತೀರ್ಮಾನಿಸಿದರೂ ಫಿಫಾ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೊನೆಗೆ ಯಾವ ಕಾರಣಕ್ಕೂ ಇಂಥ ಸಮಾರಂಭವನ್ನು ಫುಟ್ಬಾಲ್ ಅಂಗಳದಲ್ಲಿ ನಡೆಸಬಾರದು ಎಂಬ ಷರತ್ತನ್ನೂ ವಿಧಿಸಿತು. ಹೀಗಾಗಿ ಔಪಚಾರಿಕ ಉದ್ಘಾಟನಾ ಸಮಾರಂಭವಷ್ಟೇ ನಡೆಯಲಿದೆ. ಭಾರತ-ಯುಎಸ್ಎ ಪಂದ್ಯಕ್ಕೆ 50 ಸಾವಿರ ವೀಕ್ಷಕರು ಹಾಜರಾಗುವ ನಿರೀಕ್ಷೆ ಇದೆ.