ಪ್ರೊ ಕಬಡ್ಡಿ: ಜೈಪುರ ಓಟಕ್ಕೆ ಡೆಲ್ಲಿ ಬ್ರೇಕ್
Team Udayavani, Aug 6, 2019, 5:49 AM IST
ಪಾಟಲಿಪುತ್ರ (ಬಿಹಾರ): ನವೀನ್ ಕುಮಾರ್ ಅವರ ಅಮೋಘ ರೈಡಿಂಗ್ (12 ಅಂಕ) ಹಾಗೂ ಚಂದ್ರನ್ ರಂಜಿತ್ ಅವರ ಆಲ್ರೌಂಡ್ (10 ಅಂಕ) ಪ್ರದರ್ಶನದಿಂದಾಗಿ ಪ್ರೊ ಕಬಡ್ಡಿ 7ನೇ ಆವೃತ್ತಿ ಪಾಟಲಿಪುತ್ರ ಚರಣದಲ್ಲಿ ದಬಾಂಗ್ ಡೆಲ್ಲಿ 35-24 ಅಂಕಗಳ ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿದೆ. ಸತತ 4 ಜಯದಿಂದ ಬೀಗುತ್ತಿದ್ದ ಜೈಪುರ್ಗೆ ಎದುರಾದ ಮೊದಲ ಆಘಾತ ಇದಾಗಿದೆ. ಇತ್ತ ಡೆಲ್ಲಿ ತನ್ನ ಗೆಲುವಿನ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿದೆ.
ಸೋಮವಾರ ಪಾಟಲಿಪುತ್ರ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಅವಧಿಯಿಂದಲೇ ಜೈಪುರ್ ಮೇಲೆ ಡೆಲ್ಲಿ ಸವಾರಿ ಮಾಡಿತು. ಮೊದಲ ಅವಧಿ ಮುಕ್ತಾಯಕ್ಕೆ ಡೆಲ್ಲಿ 16-10 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿತ್ತು. ಎರಡನೇ ಅವಧಿಯಲ್ಲೂ ಡೆಲ್ಲಿ ಇದೇ ಮುನ್ನಡೆ ಕಾಯ್ದುಕೊಂಡಿದ್ದಲ್ಲದೆ 11 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು.
ಗುಜರಾತ್ಗೆ ಪುನೇರಿ ಗುದ್ದು
ತೀವ್ರ ಪೈಪೋಟಿಯಿಂದ ಕೂಡಿದ ದಿನದ ದ್ವಿತೀಯ ಮುಖಾಮುಖೀಯಲ್ಲಿ ಪುನೇರಿ ಪಲ್ಟಾನ್ 33-31 ಅಂತರದಿಂದ ಗುಜರಾತ್ ಫಾರ್ಚೂನ್ಜೈಂಟ್ಸ್ಗೆ ಸೋಲುಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ