ಫಿಫಾ ವಿಶ್ವಕಪ್ ಫುಟ್ ಬಾಲ್; ಲಸಿಕೆ ಕಡ್ಡಾಯವಲ್ಲ
Team Udayavani, Sep 30, 2022, 10:33 PM IST
ಕತಾರ್: ವರ್ಷಾಂತ್ಯ ಕತಾರ್ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ ಕುರಿತಂತೆ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ.
ಪಂದ್ಯಗಳನ್ನು ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಲಿರುವ ಪ್ರೇಕ್ಷಕರಿಗೆ ಕೋವಿಡ್ ಲಸಿಕೆ ಕಡ್ಡಾಯವಲ್ಲ ಎಂಬುದಾಗಿ ಫಿಫಾ ಹೇಳಿದೆ.
ಆದರೆ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದ್ದು, ಇದನ್ನು ತೋರಿಸಿ ಸ್ಟೇಡಿಯಂ ಪ್ರವೇಶಿಸಬೇಕು ಎಂದಿದೆ.
ಕತಾರ್ನಲ್ಲಿ ಮೊದಲ ಸಲ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ ನಡೆಯುತ್ತಿದ್ದು, ಅತ್ಯಧಿಕ 32 ತಂಡಗಳು ಪಾಲ್ಗೊಳ್ಳುತ್ತಿವೆ.
ಕತಾರ್ ಸರಕಾರ ಮತ್ತು ಫಿಫಾ ಈ ಕೂಟವನ್ನು ದೊಡ್ಡ ಮಟ್ಟದಲ್ಲಿ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿವೆ. ಹೀಗಾಗಿ ಕಠಿನ ಕೊರೊನಾ ನಿಯಮಗಳನ್ನು ಸಡಿಲಿಸಿವೆ.