‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

Team Udayavani, May 27, 2020, 8:43 AM IST

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

ಹೊಸದಿಲ್ಲಿ: ಕೋವಿಡ್‌-19 ನಡುವೆಯೇ ‘ಜೈವಿಕ ಸುರಕ್ಷಾ ವಲಯ’ದಲ್ಲಿ ಕ್ರಿಕೆಟನ್ನು ಪುನರಾರಂಭಿಸಬೇಕೆಂಬುದು ಅವಾಸ್ತವಿಕ ಎಂಬುದಾಗಿ ಮಾಜಿ ಕ್ರಿಕೆಟಿಗ, ‘ಗೋಡೆ’ ಖ್ಯಾತಿಯ ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.

ಅಕಸ್ಮಾತ್‌ ಎಲ್ಲ ಸುರಕ್ಷಾ ನಿಯಮವನ್ನು ಪಾಲಿಸಿಯೂ ಪಂದ್ಯದ ನಡುವೆ ಆಟಗಾರನೊಬ್ಬನಿಗೆ ‘ಪಾಸಿಟಿವ್‌’ ಬಂದರೆ ಇದಕ್ಕೆ ಹೊಣೆ ಯಾರು ಎಂಬ ಆತಂಕವನ್ನೂ ಅವರು ಹೊರಗೆಡಹಿದ್ದಾರೆ.

ಕೋವಿಡ್ ಸಂಪೂರ್ಣ ನಿರ್ಮೂಲನೆ ಆಗುವುದನ್ನು ಕಾಯದ ‘ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ’ (ಇಸಿಬಿ) ಜುಲೈ ತಿಂಗಳಲ್ಲಿ, ಜೈವಿಕ ಸುರಕ್ಷಾ ಪರಿಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನು ನಡೆಸಲು ಉದ್ದೇಶಿಸಿದ್ದನ್ನು ಪ್ರಶ್ನಿಸಿ ದ್ರಾವಿಡ್‌ ಈ ಹೇಳಿಕೆ ನೀಡಿದ್ದಾರೆ.

‘ಈ ಹಂತದಲ್ಲಿ ಇಸಿಬಿ ಇಂಥದೊಂದು ಯೋಜನೆಗೆ ಮುಂದಾಗಿರುವುದು ಸೂಕ್ತವಲ್ಲ. ಬೇರೆ ಕ್ರಿಕೆಟ್‌ ಇಲ್ಲದ ಕಾರಣ ಅವರು ಇಂಥದೊಂದು ಯೋಜನೆ ಹಾಕಿಕೊಂಡಿರಬಹುದು. ಇದು ಅವಾಸ್ತವಿಕ ಎಂದೇ ನನ್ನ ಅಭಿಪ್ರಾಯ’ ಎಂದು ದ್ರಾವಿಡ್‌ ವೆಬ್‌ ಕಾರ್ಯಕ್ರಮವೊಂದರಲ್ಲಿ ಹೇಳಿದರು.

‘ಈಗಿನ ಕ್ರಿಕೆಟ್‌ ಕ್ಯಾಲೆಂಡರ್‌ನಲ್ಲಿ ಇಂಥದೊಂದು ಕ್ರಿಕೆಟ್‌ ಯೋಜನೆಯನ್ನು ಹಮ್ಮಿಕೊಳ್ಳಲು ಎಲ್ಲರಿಗೂ ಸಾಧ್ಯವಾಗದು. ಇಲ್ಲಿ ಪ್ರಯಾಣ, ಪ್ರವಾಸ ನಡೆಸಬೇಕಾಗುತ್ತದೆ. ಬಹಳಷ್ಟು ಮಂದಿ ಸೇರುತ್ತಾರೆ. ಹೀಗಾಗಿ ಇದು ಅವಾಸ್ತವಿಕ ಎನಿಸಿಕೊಳ್ಳುತ್ತದೆ’ ಎಂದರು.

ಎಲ್ಲರಿಗೂ ಕ್ವಾರಂಟೈನ್‌!
ಇದೇ ಸಂದರ್ಭದಲ್ಲಿ ರಾಹುಲ್‌ ದ್ರಾವಿಡ್‌ ಸಂಭಾವ್ಯ ಆತಂಕವೊಂದರ ಕುರಿತೂ ಪ್ರಸ್ತಾವಿಸಿದರು. ‘ನೀವು ಎಲ್ಲ ಪರೀಕ್ಷೆ, ಕ್ವಾರಂಟೈನ್‌ ಮುಗಿಸಿ ಆಡಲಿಳಿಯುತ್ತೀರಿ. ಅಕಸ್ಮಾತ್‌ ಟೆಸ್ಟ್‌ ಪಂದ್ಯದ ಎರಡನೇ ದಿನ ಒಬ್ಬರಲ್ಲಿ ಪಾಸಿಟಿವ್‌ ಕಂಡುಬಂತು, ಆಗೇನು ಗತಿ? ಸಾರ್ವಜನಿಕ ಆರೋಗ್ಯ ಇಲಾಖೆಯವರು ಎಲ್ಲರನ್ನೂ ಕ್ವಾರಂಟೈನ್‌ ಮಾಡುತ್ತಾರೆ. ಟೆಸ್ಟ್‌ ಪಂದ್ಯ ಅಲ್ಲಿಗೇ ನಿಲ್ಲುತ್ತದೆ. ಆಗ ಇಡೀ ಸರಣಿ ನಿಲ್ಲದಂತೆ ಏನು ಮಾಡಬಹುದು ಎಂಬ ಪರಿಹಾರ ಹುಡುಕಬೇಕಾಗುತ್ತದೆ…’ ಎಂದರು.

ಟಾಪ್ ನ್ಯೂಸ್

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಶೀಘ್ರವೇ ಹಳೆಯ ವಿದ್ಯುತ್‌ ತಂತಿ ಬದಲಾವಣೆ

ಶೀಘ್ರವೇ ಹಳೆಯ ವಿದ್ಯುತ್‌ ತಂತಿ ಬದಲಾವಣೆ

ಎಸ್‌ಬಿಐಗೆ 973 ಕೋಟಿ ಪರಿಹಾರ; ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

ಎಸ್‌ಬಿಐಗೆ 973 ಕೋಟಿ ಪರಿಹಾರ; ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿ

ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಲ್ಲಿ ಆಡಿದ್ದ ಹುಡುಗ ಈಗ ಭಾರತದ ಕ್ರಿಕೆಟ್‌ ಕ್ಯಾಪ್ಟನ್‌

ಮಂಗಳೂರಲ್ಲಿ ಆಡಿದ್ದ ಹುಡುಗ ಈಗ ಭಾರತದ ಕ್ರಿಕೆಟ್‌ ಕ್ಯಾಪ್ಟನ್‌

ಆಸ್ಟ್ರೇಲಿಯನ್‌ ಓಪನ್‌: ಮೂರನೇ ಸುತ್ತಿಗೆ ಒಸಾಕಾ, ನಡಾಲ್‌

ಆಸ್ಟ್ರೇಲಿಯನ್‌ ಓಪನ್‌: ಮೂರನೇ ಸುತ್ತಿಗೆ ಒಸಾಕಾ, ನಡಾಲ್‌

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಶೀಘ್ರವೇ ಹಳೆಯ ವಿದ್ಯುತ್‌ ತಂತಿ ಬದಲಾವಣೆ

ಶೀಘ್ರವೇ ಹಳೆಯ ವಿದ್ಯುತ್‌ ತಂತಿ ಬದಲಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.