ದ್ರಾವಿಡ್ಗೆ 2.4 ಕೋ. ರೂ. ಸಂಭಾವನೆ ಪಾವತಿ
Team Udayavani, Feb 8, 2018, 6:20 AM IST
ಹೊಸದಿಲ್ಲಿ: ವಿಶ್ವ ವಿಜೇತ ಅಂಡರ್-19 ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಕಳೆದ ಡಿ. 31ರ ವರೆಗಿನ 6 ತಿಂಗಳ ವೃತ್ತಿ ಸಂಭಾವನೆಯಾಗಿ ಬಿಸಿಸಿಐ 2.4 ಕೋ. ರೂ.ನೀಡಿದೆ.
ತಂಡದ ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ನಾಲ್ಕು ತಿಂಗಳಿಗೆ 27 ಲ.ರೂ., ಮಾಜಿ ಎಡಗೈ ವೇಗಿ ಆಶಿಷ್ ನೆಹ್ರಾ 60 ಲ.ರೂ.ಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ.
ಇದರ ಜತೆಗೆ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಆಟಗಾರರಾದ ಅಜಿಂಕ್ಯ ರಹಾನೆ 1.47 ಕೋ.ರೂ., ಹಾರ್ದಿಕ್ ಪಾಂಡ್ಯ 1.27 ಕೋ. ರೂ., ಕುಲ್ದೀಪ್ ಯಾದವ್ 1.8 ಕೋ. ರೂ., ವೃದ್ಧಿಮಾನ್ ಸಾಹ 57.81 ಲ. ರೂ., ಅಭಿನವ್ ಮುಕುಂದ್ ಅವರಿಗೆ 33.69 ಲ. ರೂ.ಗಳನ್ನು ಕಳೆದ ವರ್ಷದ ಬಾಕಿ ಸಂಭಾವನೆಯಾಗಿ ಬಿಸಿಸಿಐ ನೀಡಿದೆ.