ಸಮಾನತೆಗಾಗಿ 25 ಲಕ್ಷ ರೂ. ಕೈಬಿಟ್ಟ ರಾಹುಲ್‌ ದ್ರಾವಿಡ್‌!

Team Udayavani, Feb 26, 2018, 6:45 AM IST

rahul-dravid.jpg

ಮುಂಬೈ: ಕೆಲವು ಕ್ರಿಕೆಟಿಗರು ತಮ್ಮ ಆಟದಿಂದ ಮಹಾತ್ಮರಾಗಿರುತ್ತಾರೆ. ಇನ್ನು ಕೆಲವರು ಆಟದ ಜೊತೆಗೆ ವ್ಯಕ್ತಿತ್ವದಿಂದಲೂ ಮಹಾತ್ಮರಾಗುತ್ತಾರೆ. ಅಂತಹದ್ದರಲ್ಲಿ ಭಾರತ ಕ್ರಿಕೆಟ್‌ ಕಂಡ ಮಹಾನ್‌ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಾಹುಲ್‌ ದ್ರಾವಿಡ್‌ ಕೂಡ ಒಬ್ಬರು. 

ಇತ್ತೀಚೆಗೆ ಭಾರತ 19 ವಯೋಮಿತಿ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದಾಗ ಬಿಸಿಸಿಐ ಭಾರೀ ನಗದು ಮೊತ್ತ ಘೋಷಣೆ ಮಾಡಿತ್ತು. ಈ ವೇಳೆ ಸ್ವತಃ ತಮಗೇ ಗರಿಷ್ಠ ಹಣ ನೀಡಿದ್ದರೂ ದ್ರಾವಿಡ್‌ ಎಲ್ಲರಿಗೂ ಒಂದೇ ತೆರನಾಗಿ ನಗದು ಇರಲಿ ಎಂದು ಆಗ್ರಹಿಸಿದ್ದರು. ಇದರ ಮುಂದುವರಿದ ಭಾಗವೆಂದರೆ ದ್ರಾವಿಡ್‌ ತಮಗೆ ನೀಡಲ್ಪಟ್ಟ 50 ಲಕ್ಷ ರೂ. ಹಣದಲ್ಲಿ 25 ಲಕ್ಷ ರೂ. ಬಿಟ್ಟು ಬಿಡಲು ನಿರ್ಧರಿಸಿದ್ದಾರೆಂಬುದು!  ಮೇಲಿನ ಬೆಳವಣಿಗೆಯನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

ತಂಡ ವಿಶ್ವಕಪ್‌ ಗೆದ್ದಾಗ ಬಿಸಿಸಿಐ ತರಬೇತುದಾರ ದ್ರಾವಿಡ್‌ಗೆ 50 ಲಕ್ಷ ರೂ., ಸದಸ್ಯರಿಗೆ ತಲಾ 30 ಲಕ್ಷ ರೂ., ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂ. ಘೋಷಿಸಿತ್ತು. ಇದನ್ನು ವಿರೋಧಿಸಿರುವ ದ್ರಾವಿಡ್‌ ನಗದು ಮೊತ್ತದಲ್ಲಿ ಸಮಾನತೆ ತರಲು ತಮ್ಮದೇ ಹಣದಲ್ಲಿ 25 ಲಕ್ಷ ರೂ. ಬಿಡಲು ನಿರ್ಧರಿಸಿದ್ದಾರೆ. ಅದರ ಬದಲಿಗೆ ತಂಡದ ಶ್ರೇಯಸ್ಸಿಗಾಗಿ ದುಡಿದ ಎಲ್ಲ ಸಹಾಯಕ ಸಿಬ್ಬಂದಿಗೂ ತಲಾ 25 ಲಕ್ಷ ರೂ. ನೀಡಲು ಆಗ್ರಹಿಸಿದ್ದಾರೆ. ಬರೀ ತಂಡದೊಂದಿಗೆ ತೆರಳಿದ ಸಿಬ್ಬಂದಿ ಮಾತ್ರವಲ್ಲ ಪ್ರವಾಸದ ವೇಳೆ ಇರದ ಅದಕ್ಕೂ ಮುನ್ನ ತಂಡಕ್ಕಾಗಿ ಪರಿಶ್ರಮ ಹಾಕಿದ ಎಲ್ಲರಿಗೂ ಈ ಮೊತ್ತ ಸಿಗಲು ಅವರ ಆಗ್ರಹವೇ ಕಾರಣವಾಗಿದೆ.

ಈ ನಡೆಯಿಂದ ಕಳೆದ ವರ್ಷ ತಂಡದೊಂದಿಗೆ ಪ್ರಯಾಣಿಸಿ ಅಲ್ಲೇ ಮೃತಪಟ್ಟಿದ್ದ ಸಹಾಯಕ ಸಿಬ್ಬಂದಿ ರಾಜೇಶ್‌ ಸಾವಂತ್‌ ಕುಟುಂಬಕ್ಕೆ ನೆರವಾಗಲಿದೆ. ಈಗಾಗಲೇ ತಂಡದೊಂದಿಗೆ ವಿಶ್ವಕಪ್‌ ಪ್ರವಾಸದಲ್ಲಿದ್ದ ಬೌಲಿಂಗ್‌ ತರಬೇತುದಾರ ಪರಸ್‌ ಮಾಂಬ್ರೆ, ಕ್ಷೇತ್ರರಕ್ಷಣೆ ತರಬೇತುದಾರ ಅಭಯ್‌ ಶರ್ಮ, ದೈಹಿಕ ತರಬೇತುದಾರ ಯೋಗೇಶ್‌ ಪರ್ಮಾರ್‌, ಇವರ ಸಹಾಯಕ ಆನಂದ್‌ ದಾಟೆ, ಅಂಗಮರ್ದಕ ಮಂಗೇಶ್‌ ಗಾಯಕ್ವಾಡ್‌, ವಿಡಿಯೋ ವಿಶ್ಲೇಷಕ ದೇವರಾಜ್‌ ರಾವತ್‌ಗೂ ತಲಾ 25 ಲಕ್ಷ ರೂ. ಸಿಗಲಿದೆ.

ಅಷ್ಟು ಮಾತ್ರವಲ್ಲ ಹೆಚ್ಚುವರಿಯಾಗಿ ನಾಲ್ಕು ಜನರಿಗೆ ತಲಾ 25 ಲಕ್ಷ ರೂ. ಸಿಗಲಿದೆ. 2017ರಲ್ಲಿ ಇಂಗ್ಲೆಂಡ್‌ ಪ್ರವಾಸದ ವೇಳೆ ತರಬೇತುದಾರನಾಗಿದ್ದ ಡಬ್ಲೂé.ವಿ.ರಾಮನ್‌, ಅಂಕಿಸಂಖ್ಯೆ ನಿರ್ವಾಹಕರಾದ ಮನುಜ್‌ ಶರ್ಮ, ಸುಮೀತ್‌ ಮಲಹಾಪುರ್ಕರ್‌, ಸಹಾಯಕ ತರಬೇತಿ ಸಿಬ್ಬಂದಿ ಅಮೋಘ… ಪಂಡಿತ್‌, ದಿವಂಗತ ಸಹಾಯಕ ಸಿಬ್ಬಂದಿ ರಾಜೇಶ್‌ ಸಾವಂತ್‌ಗೂ ತಲಾ 25 ಲಕ್ಷ ರೂ. ಸಿಗಲಿದೆ.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.