ಬಿಬಿಎಲ್ ಟಿ20: ದಾಖಲೆಯ ಮೂರನೇ ಹ್ಯಾಟ್ರಿಕ್ ಕಿತ್ತ ರಶೀದ್ ಖಾನ್
Team Udayavani, Jan 9, 2020, 2:33 PM IST
ಅಡಿಲೇಡ್: ಚುಟುಕು ಕ್ರಿಕೆಟ್ನಲ್ಲಿ ಆಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ ಒಟ್ಟಾರೆ 3ನೇ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ. ಸದ್ಯ ನಡೆಯುತ್ತಿರುವ ಬಿಗ್ಬಾಷ್ ಟಿ20 ಲೀಗ್ (ಬಿಬಿಎಲ್) ವೇಳೆ ರಶೀದ್ ಇಂತಹದೊಂದು ಐತಿಹಾಸಿಕ ಪರಾಕ್ರಮ ಮೆರೆದಿದ್ದಾರೆ.
ಅಡಿಲೇಡ್ ಸ್ಟ್ರೈಕರ್ ತಂಡವನ್ನು ಪ್ರತಿನಿಧಿಸುತ್ತಿರುವ ಆಲ್ರೌಂಡರ್ ರಶೀದ್ ಖಾನ್ ಬುಧವಾರ ನಡೆದ ಸಿಡ್ನಿ ಸಿಕ್ಸರ್ ತಂಡದ ವಿರುದ್ಧದ ಪಂದ್ಯದ ವೇಳೆ ಪರಾಕ್ರಮ ಮೆರೆದರು.
ಜೆಮ್ಸ್ ವಿನ್ಸ್, ಜ್ಯಾಕ್ ಎಡ್ವರ್ಡ್ಸ್ ಹಾಗೂ ಜೋರ್ಡನ್ ಸಿಲ್ಕ್ ವಿಕೆಟ್ ಅನ್ನು ಸತತವಾಗಿ ಪತನಗೊಳಿಸಿದ ರಶೀದ್ ಖಾನ್ ಮೆರೆದರು.
ರಶೀದ್ ಖಾನ್ ಈ ಸಾಧನೆಯ ಹೊರತಾಗಿಯೂ ಸಿಡ್ನಿ ಸಿಕ್ಸರ್ ತಂಡ ಪಂದ್ಯದಲ್ಲಿ ಜಯ ಸಾಧಿಸಿತು. 19ನೇ ಓವರ್ ನಲ್ಲಿ ಜೋಶ್ ಹ್ಯಾಜಲ್ ವುಡ್ ಹ್ಯಾಟ್ರಿಕ್ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದಿತ್ತರು.