ಮೂರನೇ ಟೆಸ್ಟ್: ಜಡೇಜಾಗೆ ನಿಷೇಧ
Team Udayavani, Aug 7, 2017, 7:00 AM IST
ಕೊಲಂಬೊ: ಐಸಿಸಿಯ ನೀತಿ ಸಂಹಿತೆ ಉಲ್ಲಂಘಿಸಿದ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ನಿಷೇಧ ಹೇರಲಾಗಿದೆ. 24 ತಿಂಗಳ ಅವಧಿಯಲ್ಲಿ ಆರು ದೋಷ ಅಂಕ ಪಡೆದ ಕಾರಣಕ್ಕಾಗಿ ಐಸಿಸಿ ಜಡೇಜ ಅವರಿಗೆ ಒಂದು ಪಂದ್ಯಕ್ಕೆ ನಿಷೇಧ ಹೇರಿದೆ.
ತನ್ನದೇ ಬೌಲಿಂಗ್ ವೇಳೆ ಜಡೇಜ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಆರಂಭಿಕ ದಿಮುತ್ ಕರುಣರತ್ನೆ ಕಡೆ ಎಸೆದಿರುವುದು ಐಸಿಸಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮೈದಾನ ಅಂಪಾಯರ್ಗಳಾದ ಬ್ರೂಸ್ ಆಕ್ಸೆನ್ಫೋರ್ಡ್ ಮತ್ತು ರಾಡ್ ಟಕ್ಕರ್ ಆರೋಪಿಸಿದ್ದರು. ಈ ಉಲ್ಲಂಘನೆಗಾಗಿ ಅವರು ಮೂರು ದೋಷ ಅಂಕ ಪಡೆದರು. 2016ರ ಅಕ್ಟೋಬರ್ನಲ್ಲಿ ಪಿಚ್ ಮೇಲೆ ಓಡಿದ ಕಾರಣಕ್ಕಾಗಿ ಅವರಿಗೆ ಮೂರು ದೋಷ ಅಂಕ ವಿಧಿಸಲಾಗಿತ್ತು.
ತನ್ನ ತಪ್ಪನ್ನು ಒಪ್ಪಿಕೊಂಡ ಜಡೇಜ ಅವರಿಗೆ ಐಸಿಸಿ ಮ್ಯಾಚ್ ರೆಫರಿ ರಿಚೀ ರಿಚಡ್ಸìನ್ ವಿಧಿಸಿದ ಒಂದು ಪಂದ್ಯ ನಿಷೇಧ ಹೇರಿದರಲ್ಲದೇ ಪಂದ್ಯ ಮೊತ್ತದ ಶೇಕಡಾ 50 ರಷ್ಟು ದಂಡವನ್ನು ಕೂಡ ವಿಧಿಸಿದರು.