ತಾತ್ಕಾಲಿಕ ನಾಯಕನ ಬಗ್ಗೆ ಕೇಳಿದ್ದೀರಾ ? ಪೈನ್ ಗೆ ಪಂಥ್ ಪಂಚ್
Team Udayavani, Dec 29, 2018, 9:53 AM IST
ಮೆಲ್ಬೋರ್ನ್ : ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಹಿಡಿತ ಸಾಧಿಸಿದ್ದು, ಪಂದ್ಯ ಗೆಲ್ಲಲು ಕೇವಲ 2 ವಿಕೆಟ್ ನ ಅಗತ್ಯವಿದೆ. ಈ ಮಧ್ಯೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಮತ್ತು ಭಾರತೀಯ ವಿಕೆಟ್ ಕೀಪರ್ ರಿಷಭ್ ಪಂಥ್ ತಮ್ಮ ಮಾತಿನಿಂದಲೇ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ.
ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ್ದ ರಿಷಬ್ ಪಂಥ್ ಗೆ ಟಿಮ್ ಪೈನ್, ‘ ಏಕದಿನ ಸರಣಿಗೆ ನಿನಗೆ ವಿಶ್ರಾಂತಿ ಇದೆಯಲ್ವಾ, ನನ್ನ ಮನೆಗೆ ಬಾ. ನಾನು ನನ್ನ ಹೆಂಡತಿ ಸಿನಿಮಾಗೆ ಹೋಗ್ತಿವಿ, ನೀನು ನನ್ನ ಮಕ್ಕಳನ್ನು ನೋಡಿಕೋ ‘ಎಂದು ಕಿಚಾಯಿಸಿದ್ದರು.
ನಾಲ್ಕನೇ ದಿನ ಸರಿಯಾಗಿ ತಿರುಗೇಟು ನೀಡಿದ ಪಂಥ್, ಪೈನ್ ಬ್ಯಾಟಿಂಗ್ ಗೆ ಆಗಮಿಸಿದಾಗ ಅಲ್ಲೇ ಹತ್ತಿರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾಯಾಂಕ್ ಅಗರ್ವಾಲ್ ರನ್ನು ಕರೆದು, ‘ಈಗ ವಿಶೇಷ ಅತಿಥಿ ಬಂದಿದ್ದಾರೆ ಎಂದು ಕಾಲೆಳಿದಿದ್ದಾರೆ. ಇನ್ನೂ ಮುಂದೆ ಹೋಗಿ, ಮಾಯಾಂಕ್ ನೀನು ಯಾವತ್ತಾದ್ರೂ ತಾತ್ಕಾಲಿಕ ನಾಯಕನ ಬಗ್ಗೆ ಕೇಳಿದ್ದೀಯಾ, ನಾನೀಗ ತಾತ್ಕಾಲಿಕ ನಾಯಕನ್ನು ನೋಡ್ತಾ ಇದ್ದೀನಿ’ ಎಂದು ಪೈನ್ ಗೆ ಸರಿಯಾಗೇ ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ